ದೆಹಲಿಯಲ್ಲಿ ಆಪ್ ಕಮಾಲ್ – 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ

ದೆಹಲಿ ಪಾಲಿಕೆಯ ಚುನಾವಣೆಯ ಫಲಿತಾಂಶ(Delhi Municipal Election Results) ಪ್ರಕಟಗೊಂಡಿದ್ದು ಮೊದಲ ಬಾರಿಗೆ ಆಪ್(AAP) ಅಧಿಕಾರಕ್ಕೆ ಏರಿದೆ.

ದೆಹಲಿ ಪಾಲಿಕೆಯ ಚುನಾವಣೆಯ ಫಲಿತಾಂಶ(Delhi Municipal Election Results) ಪ್ರಕಟಗೊಂಡಿದ್ದು ಮೊದಲ ಬಾರಿಗೆ ಆಪ್(AAP) ಅಧಿಕಾರಕ್ಕೆ ಏರಿದೆ. ಈ ಮೂಲಕ 15 ವರ್ಷಗಳ ಬಿಜೆಪಿ(BJP) ಆಡಳಿತ ಅಂತ್ಯಗೊಂಡಿದೆ. ಮತ ಎಣಿಕೆಯ ಆರಂಭದಲ್ಲಿ ಬಿಜೆಪಿ ಮತ್ತು ಆಪ್ ಮಧ್ಯೆ ನೇರಾನೇರ ಸ್ಪರ್ಧೆ ಇತ್ತು. ಬಳಿಕ ಆಪ್ ಮುನ್ನಡೆಯನ್ನು ಕಾಯ್ದುಕೊಂಡಿತು.

ಚುನಾವಣೋತ್ತರ ಸಮೀಕ್ಷೆಗಳು ಆಪ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಭವಿಷ್ಯ ನುಡಿದಿದ್ದವು. ಬಿಜೆಪಿ ( BJP )  ಮೂರಂಕಿ ದಾಟುವುದಿಲ್ಲ ಎಂದು ಹೇಳಿದ್ದವು. ಆದರೆ ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಆಪ್ಗೆ ಪ್ರಬಲ ಸ್ಪರ್ಧೆ ನೀಡಿದೆ. 2007 ರಿಂದ ಬಿಜೆಪಿ ಪಾಲಿಕೆಯ ಅಧಿಕಾರದಲ್ಲಿದೆ. ಡಿಸೆಂಬರ್ 4 ರಂದು ಚುನಾವಣೆ ನಡೆದಿದ್ದು 250 ಸ್ಥಾನಗಳಿರುವ ಪಾಲಿಕೆಯಲ್ಲಿ ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿದೆ.

ಇದನ್ನು ಓದಿ : –  ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ – ಸಿಎಂ ಬೊಮ್ಮಾಯಿ ಗಂಭೀರ ಆರೋಪ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!