ಐಎಎಸ್ ( IAS ) ಅಧಿಕಾರಿ ರೋಹಿಣಿ ಸಿಂಧೂರಿ ( ROHINI SINDHURI ) ಗೆ ಸಂಕಷ್ಟ ಎದುರಾಗಿದೆ. ತಮ್ಮ ಪತಿಗೆ ಜಮೀನು ಒತ್ತುವರಿ ಮಾಡಲು ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
My farm which is a Trust Property located in Kenchenahalli Yelahanka is being encroached on illegally by Sudhir Reddy (and Madhu Reddy) from the Bangalore Land Mafia. With the help of his wife who is an IAS Officer by the name of Rohini Sindhuri..
— Lucky Ali (@luckyali) December 4, 2022
ತನ್ನ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಬಾಲಿವುಡ್ ನಟ , ಹಾಡುಗಾರ ಮೆಹಮೂದ್ ಆಲಿ ಪುತ್ರ ಲಕ್ಕಿ ಆಲಿ ಡಿಜಿಪಿ ಪ್ರವೀಣ್ ಸೂದ್ ಗೆ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : – ಅಂಜನಾದ್ರಿ ಬೆಟ್ಟದಲ್ಲಿಯೂ ಅಪ್ಪು ಕಲರವ
Dear everyone , blatant misuse of power by one influential lady IAS officer wife of one Sudhir Reddy a local builder who has used and is currently using the state police to subvert law and using force to steal Trust properties ..in contempt of courts in Bangalore ..
— Lucky Ali (@luckyali) December 2, 2022
ಪತ್ನಿ ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಸಹಾಯದಿಂದ ಜಾಗ ಒತ್ತುವರಿಯಾಗಿದೆ ಎಂದು ಆರೋಪ ಕೇಳಿ ಬಂದಿದೆ. ಸುಧೀರ್ ರೆಡ್ಡಿ ಹಾಗೂ ಮಧು ರೆಡ್ಡಿ ಎಂಬುವವರಿಂದ ಒತ್ತುವರಿ ಆಗಿದೆ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ. ಯಲಹಂಕದ ಕೆಂಚೇನಹಳ್ಳಿ ಬಳಿ ಲಕ್ಕಿ ಆಲಿ ಪ್ರಾಪರ್ಟಿ ಇದೆ. ಈ ಬಗ್ಗೆ ಎಸಿಪಿಯವರಿಗೆ ದೂರು ನೀಡಿದ್ರೂ ರೆಸ್ಪಾನ್ಸ್ ಮಾಡ್ತಿಲ್ಲ. ತಮ್ಮ ಪತ್ನಿ ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಸಹಾಯದಿಂದ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿದ್ದಾರೆ.
ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದಿರುವ ಕುರಿತಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಈ ಸುದ್ದಿಯನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ಲಕ್ಕಿ ಅಲಿಯವರ ದೂರಿನ ಬಗ್ಗೆ ಮಾಹಿತಿ ಪಡೆಯುತ್ತೇನೆ. ಡಿಜಿಪಿಯವರ ಜತೆ ಇದರ ಬಗ್ಗೆ ಮಾತಾಡಿ ಮಾಹಿತಿ ಪಡೆಯುತ್ತೇನೆ. ಅವರು ಯಾವ ಠಾಣೆಗೆ ದೂರು ಕೊಟ್ಟಿದ್ರು, ಯಾವ ಪೊಲೀಸರು ದೂರು ನಿರಾಕರಿಸಿದ್ರು ಅಂತ ವಿವರ ಪಡೀತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : – ಗುಜರಾತ್ ಚುನಾವಣೆ – ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ಮೋದಿ