ಯುವತಿಯ ಮೇಲೆ ಆ್ಯಸಿಡ್ ಹಾಕಿ ತಲೆಮರೆಸಿಕೊಂಡಿರುವ ವ್ಯಕ್ತಿ ಬಂಧನಕ್ಕೆ ಮುಂದಾಗಿರುವ ಪೊಲೀಸರು, ನೆರೆಯ ರಾಜ್ಯದಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆಸಿಡ್ ದಾಳಿ ಬಳಿಕ ಆರೋಪಿಯು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನೇರವಾಗಿ ಹೊರ ರಾಜ್ಯಕ್ಕೆ ತೆರಳಿದ್ದಾನೆ ಎನ್ನಲಾಗಿದೆ.
ಇತ್ತ ಆರೋಪಿ ಬಂಧನಕ್ಕೆ ಪಶ್ಚಿಮ ವಿಭಾಗದ ಪೊಲೀಸರು, ವಿಜಯನಗರ ಪೊಲೀಸ್ ಠಾಣೆ ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಲಾಗಿದೆ. ಆರೋಪಿಯು ತಮಿಳುನಾಡಿಗೆ ತೆರಳಿರುವ ಮಾಹಿತಿ ದೊರೆತಿದೆ ಎನ್ನಲಾಗಿದೆ. ಪುತ್ರಿಗೆ ಮದುವೆಯಾಗುವಂತೆ ನಾಗೇಶ್ ಕಿರುಕುಳ ನೀಡುತ್ತಿದ್ದನ್ನು ನಮಗೆ ಹೇಳಿದ್ದಳು. ಇದನ್ನೂ ಓದಿ :- ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ – ಗ್ರಾಪಂ ಅಧ್ಯಕ್ಷ ನಾಗೇಶ್ ಮೊಬೈಲ್ ವಶಕ್ಕೆ ಪಡೆದ ಉಡುಪಿ ಪೊಲೀಸರು
ದಾಳಿಯ ಮುನ್ನಾ ದಿನವೂ ಪುತ್ರಿಯನ್ನು ಭೇಟಿಯಾಗಿ ವಿವಾಹಕ್ಕೆ ಒತ್ತಾಯಿಸಿದ್ದು ತಿರಸ್ಕರಿಸಿದರೆ ಬದುಕಲು ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆಯ ತಂದೆ ಕಾಮಾಕ್ಷಿ ಪಾಳ್ಯ ಠಾಣೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ. ವಿವಾಹವಾಗಲು ನಿರಾಕರಿಸಿದ್ದ ಯುವತಿಗೆ ಆ್ಯಸಿಡ್ ಹಾಕಲು ಆರೋಪಿ ಮೋದಲೇ ಸಿದ್ಧತೆ ಮಾಡಿಕೊಂಡಿದ್ದ. ಪೂರ್ವ ನಿಯೋಜನೆಯಂತೆ ಆರೋಪಿಯು ಥಿನ್ ಗ್ಲೌಸ್ ಹಾಗೂ ಬಾಟಲಿಯಲ್ಲಿ ಆ್ಯಸಿಡ್ ಇಟ್ಟುಕೊಂಡು ಆಟೋದಲ್ಲಿ ಯುವತಿಗಾಗಿ ಕಾದು ಕುಳಿತಿದ್ದ.
ಇದನ್ನೂ ಓದಿ :- ಶಾಂತವೀರ ಮಹಾಸ್ವಾಮೀಜಿ ನಿಧನ – ಟ್ವೀಟ್ ಮೂಕಲ ಸಂತಾಪ ಸೂಚಿಸಿದ ಹೆಚ್.ಡಿ.ಕೆ