ರಾಯರ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ( SHIVRAJ KUMAR ) ಪತ್ನಿ ಸಮೇತವಾಗಿ ರಾಯರ ದರ್ಶನ ಪಡೆದಿದ್ದಾರೆ.

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ( SHIVRAJ KUMAR ) ಪತ್ನಿ ಸಮೇತವಾಗಿ ರಾಯರ ದರ್ಶನ ಪಡೆದಿದ್ದಾರೆ.

ಇಂದು ರಾಯಚೂರು ( RAICHURU ) ನಗರದಲ್ಲಿ ಆಯೋಜಿಸಿರುವ ವೇದ ಸಂಭ್ರಮ, ವೇದ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ನಡುವೆ ಬೆಳಿಗ್ಗೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ, ಗ್ರಾಮದ ದೇವತೆ ಶ್ರೀಮಂಚಾಲಮ್ಮ ದೇವಿ ದರ್ಶನ ಪಡೆದುಕೊಂಡು ಬಳಿಕ ರಾಯರ ಮೂಲ ಬೃಂದವನದ ದರ್ಶನ ಪಡೆದುಕೊಂಡು ವಿಶೇಷ ಪೂಜೆ ನೇರವೇರಿಸಿದ್ದಾರೆ. ಇದನ್ನೂ ಓದಿ : –  ತಮಿಳುನಾಡಿನ ದೇವಸ್ಥಾನಗಳಲ್ಲಿ ಮೊಬೈಲ್ ಬಳಸುವಂತಿಲ್ಲ – ಮದ್ರಾಸ್ ಹೈಕೋರ್ಟ್

ಇದಾದ ಬಳಿಕ ಶ್ರೀಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥರನ್ನು ಭೇಟಿಯಾಗಿ ಉಭಯ ಕುಶಲೋಪಕರಿಯಾಗಿ ಚರ್ಚೆ ನಡೆಸಿದರು. ಶ್ರೀಗಳಿಂದ ಆರ್ಶಿವಾದ ಪಡೆದುಕೊಂಡು ಶ್ರೀಮಠದಿಂದ ಪೀಠಾಧಿಪತಿಗಳು ಸತಿ-ಪತಿ ಇಬ್ಬರಿಗೆ ಸನ್ಮಾನಿಸಿ ಆರ್ಶಿವಾದಿಸಿದರು.

ಇದನ್ನೂ ಓದಿ : – ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ಪರಿಹಾರ ಘೋಷಿಸಿದ ಸಿಎಂ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!