ಬೆಂಗಳೂರು: ತೆರೆ ಮೇಲೆ ನಾಯಕರ ಅಬ್ಬರ ನೋಡಿ ಫ್ಯಾನ್ಸ್ ಆಗಿರ್ತಿವಿ. ಫೈಟ್ ಮಾಡೋದನ್ನ ನೋಡಿ ಫಿದಾ ಆಗಿರ್ತಿವಿ. ಡೈಲಾಗ್ ಹೊಡೆಯೋದನ್ನ ನೋಡಿ ಪಾಗಲ್ ಆಗಿರ್ತಿವಿ. ಆದ್ರೆ ಆ ಫೈಟ್ ಮಾಡೋದಕ್ಕೆ ನಾಯಕ ಎಷ್ಟೋ ಸಲ ತನ್ನ ಪ್ರಾಣವನ್ನ ಪಣಕ್ಕಿಟ್ಟಿರ್ತಾನೆ ಅನ್ನೋದು ಮಾತ್ರ ನಮ್ಗೆ ಗೊತ್ತಿರೋದೆ ಇಲ್ಲ.
ಕಳೆದ ಕೆಲವು ದಿನಗಳಿಂದ ಕಬ್ಜ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಮಿನರ್ವ ಮಿಲ್ನಲ್ಲಿ ದೊಡ್ಡ ಸೆಟ್ ಹಾಕಿ ಒಮ್ಮೆಲೆ ಎಲ್ಲವನ್ನು ಶೂಟ್ ಮಾಡುವ ಫ್ಯ್ಲಾನ್ ಚಿತ್ರತಂಡದ್ದು. ಅದರಂತೆ ಮಾರ್ಕೆಟ್ ಸೆಟ್ನಲ್ಲಿ ಫೈಟ್ ಸೀನ್ ತೆಗೆಯೋದಕ್ಕೆ ಫ್ಲ್ಯಾನ್ ಮಾಡಿದ್ದಾರೆ.
ಉಪೇಂದ್ರ ಹಾಗೂ ರೌಡಿಗಳ ನಡುವೆ ನಡೆಯೋ ಫೈಟ್ ಅದು. ಈ ಸೀನ್ನಲ್ಲಿ ರಾಡ್ನಲ್ಲಿ ಹೊಡೆಯುವಾಗ ಉಪೇಂದ್ರ ಅವರು ತಪ್ಪಿಸಿಕೊಳ್ಳಬೇಕು. ಆದ್ರೆ ಎಷ್ಟೇ ಪ್ರಾಕ್ಟೀಸ್ ಮಾಡಿದ್ರು ಒಮ್ಮೊಮ್ಮೆ ಎಡವಟ್ಟುಗಳಾಗುತ್ತವೆ ಅನ್ನೋದಕ್ಕೆ ಈ ಶೂಟಿಂಗ್ ಸಾಕ್ಷಿ.
ರೌಡಿ ರಾಡ್ನಿಂದ ಹೊಡೆಯುವಾಗ ಉಪೇಂದ್ರ ತಪ್ಪಿಸಿಕೊಳ್ಳೋದಕ್ಕೆ ಹೋಗ್ತಾರೆ ಆದ್ರೆ ರಾಡ್ ಸಡನ್ ಆಗಿ ತಲೆಗೆ ಬಿದ್ದೆ ಬಿಡುತ್ತೆ. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನೋಡುಗರಿಗೆ ಒಂದು ಕ್ಷಣ ಎದೆ ಝಲ್ ಎನಿಸಿದೆ. ಉಪೇಂದ್ರ ಅವರಿಗೆ ಏನಾಯ್ತೋ ಅನ್ನೋ ಭಯ ಕಾಡಿದೆ.
ಆದ್ರೆ ಉಪೇಂದ್ರ ಅವರು ಇದಕ್ಕೆಲ್ಲಾ ಡೋಂಟ್ ಕೇರ್ ಎಂದಿದ್ದಾರೆ. ಪೆಟ್ಟಾದರೂ ತಲೆ ಸಾವರಿಸಿಕೊಂಡು ಮತ್ತೆ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ.