`ಕೆಜಿಎಫ್’ ( KGF ) ಸಿನಿಮಾ ಬಂದ ಮೇಲೆ ಗಡಿ ದಾಡಿ ಬೆಳೆದಿರುವ ನಟ ಯಶ್ ( YASH )ಗೆ ದೇಶದೆಲ್ಲೆಡೆ ಅಭಿಮಾನಿಗಳಿದ್ದಾರೆ.
ರಾಕಿಭಾಯ್ ನಟನೆ ನೋಡಿದ ಮೇಲಂತೂ ಪರಭಾಷೆ, ಹೊರ ದೇಶದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ವಿದೇಶದ ಪ್ರವಾಸದಲ್ಲಿರುವ ಯಶ್ ದಂಪತಿ, ಇಟಲಿ ಮತ್ತು ಬಾಂಗ್ಲಾ ಅಭಿಮಾನಿಗಳನ್ನ ಭೇಟಿಯಾಗಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಪೆಷಲ್ ಆಗಿ ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳಿಗೆ ಯಶ್ ಧನ್ಯವಾದ ತಿಳಿಸಿದ್ದಾರೆ. ಇದನ್ನು ಓದಿ : – ಮಾನ್ಸೂನ್ ರಾಗ ಚಿತ್ರದ ರಾಗಸುಧಾ ಥೀಮ್ ವಿಡಿಯೋಗೆ ಮಿಲಿಯನ್ ಸಂಭ್ರಮ.
ನನ್ನ ಮೇಲಿನ ನಿಮ್ಮ ಪ್ರೀತಿ, ಗಡಿಯನ್ನು ಮೀರಿದೆ. ಇಟಲಿ ಮತ್ತು ಬಾಂಗ್ಲಾದೇಶದಿಂದ ಭೇಟಿಯಾದ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಯಶ್ ಪೋಸ್ಟ್ ಮಾಡಿದ್ದಾರೆ. ಇನ್ನು ಯಶ್ ಮುಂದಿನ ಸಿನಿಮಾದ ಅಪ್ಡೇಟ್ ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.
ಇದನ್ನು ಓದಿ : – ಗಂಡು ಮಗುವಿಗೆ ತಾಯಿಯಾದ ಕಿರುತೆರೆ ನಟಿ ಅಮೃತಾ ರೂಪೇಶ್