ನಟಿ ಅದಿತಿ ಪ್ರಭುದೇವ ( ADITHI PRABHUDEVA ) ಯಶಸ್ ( YASHAS ) ಜತೆ ವೈವಾಹಿಕ ಜೀವನಕ್ಕೆ ಇಂದು ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ನ ಗಾಯತ್ರಿ ವಿಹಾರ ಗ್ರ್ಯಾಂಡ್ ನಲ್ಲಿ ಈ ಜೋಡಿ ಮದುವೆ ಆಗಿದೆ.
ಹಲವು ಸೆಲೆಬ್ರಿಟಿಗಳು, ಕುಟುಂಬದವರು, ಗೆಳೆಯರ ಸಮ್ಮುಖದಲ್ಲಿ ಈ ವಿವಾಹ ಕಾರ್ಯ ನೆರವೇರಿದೆ. ಅದಿತಿ ಪ್ರಭುದೇವ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.
ನ. 26ರಂದು ಅರಿಶಿಣ ಶಾಸ್ತ್ರಗಳು ನಡೆದವು. ಇದನ್ನೂ ಓದಿ : – ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತ – ಕೆ.ಸಿ ವೇಣುಗೋಪಾಲ್ ಗೆ ಗಾಯ!
ನ. 27ರಂದು ಪ್ಯಾಲೇಸ್ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಯಶ್, ರಾಧಿಕಾ ಪಂಡಿತ್, ಶ್ರೀನಗರ ಕಿಟ್ಟಿ, ಮೇಘಾ ಶೆಟ್ಟಿ, ರಂಜನಿ ರಾಘವನ್ ಸೇರಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ನವದಂಪತಿಗೆ ಶುಭಾಶಯ ಕೋರಿದರು.
ಇದನ್ನೂ ಓದಿ : – ಮಂಗಳೂರು ಸ್ಫೋಟ ಪ್ರಕರಣ, ಸ್ಯಾಟ್ ಲೈಟ್ ಫೋನ್ ಬಳಕೆಯಾಗಿಲ್ಲ-ಎಸ್ ಪಿ ಸ್ಪಷ್ಟನೆ