ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (RAMYA) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸಿನಿಮಾ ರಿಲೀಸ್, ಹಾಡುಗಳಿಗೆ ಸ್ಪಂದನೆ, ಟ್ರೈಲರ್ ರಿಲೀಸ್ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳ ಕುರಿತು ಅವರು ಸಾಮಾಜಿಕ ತಾಣಗಳ ಮೂಲಕ ಅಭಿಮಾನಿಗಳ ಜೊತೆ ಚಾಟ್ ಮಾಡುತ್ತಿರುತ್ತಾರೆ.
ಈ ಬಾರಿ ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಯುಗಾದಿ ಅಂದಾಕ್ಷಣ ನಾನಾ ಬಗೆಯ ಹೋಳಿಗೆಗಳನ್ನು ಮಾಡಲಾಗುತ್ತದೆ. ಹಾಗಾಗಿ ನಿಮಗೆ ಯಾವ ಹೋಳಿಗೆ ಇಷ್ಟ ಎಂದು ಕೇಳಿದ್ದಾರೆ. ಹಾಗಂತ ನೀವು ಇಷ್ಟ ಬಂದದ್ದನ್ನು ಹೇಳುವ ಹಾಗಿಲ್ಲ. ಅವರೇ ಆಪ್ಷನ್ (option) ಕೂಡ ಕೊಟ್ಟಿದ್ದಾರೆ. ಅದರ ಪ್ರಕಾರ ನೀವು ಯಾವ ಹೋಳಿಗೆ ನಿಮಗೆ ಇಷ್ಟವೆಂದು ಹೇಳಬೇಕು.
ಅಷ್ಟಕ್ಕೂ ಅವರು ಕೊಟ್ಟಿರುವ ಆಪ್ಷನ್ ನಲ್ಲಿ ಎರಡು ಹೋಳಿಗೆಗಳು ಮಾತ್ರ ಇವೆ. ಒಂದು ಕಾಯಿ ಹೋಳಿಗೆ ಮತ್ತೊಂದು ಬೇಳೆ ಹೋಳಿಗೆ. ಇವೆರಡರಲ್ಲಿ ಮಾತ್ರ ನಿಮ್ಮ ಇಷ್ಟದ ಹೋಳಿಗೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮತ್ತೊಂದು ಹೇಳುವುದಕ್ಕೂ ಅವರು ಅವಕಾಶವನ್ನು ಕೊಟ್ಟಿಲ್ಲ. ರಮ್ಯಾ ಕಾಯಿ ಹೋಳಿಗೆಯೇ ನನಗೆ ಫೆವರಿಟ್ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ :- ಸಿದ್ದಗಂಗಾ ಶ್ರೀಗಳ ಪಾತ್ರಕ್ಕೆ ಅಮಿತಾಭ್ ಬಚ್ಚನ್? ಹಂಸಲೇಖ ಸಾರಥ್ಯದಲ್ಲಿ ಮೂಡಿ ಬರಲಿದೆ ಸಿನಿ ಸೀರಿಸ್