ಬೆಂಗಳೂರು: ರಶ್ಮಿಕಾ ಮಂದಣ್ಣ ಇದೀಗ ಬಹುಭಾಷೆಗಳಲ್ಲಿ ಬ್ಯುಸಿಯಾಗಿದ್ಧಾರೆ. ಕನ್ನಡದ ಕಿರಿಕ್ ಪಾರ್ಟಿ ಟು ಬಾಲಿವುಡ್ ಅಂಗಳದವರೆಗೂ ಅಭಿನಯದಲ್ಲಿ ಸೈ ಎನಿಸಿಕೊಂಡ ನಟಿ ರಶ್ಮಿಕ ಮಂದಣ್ಣ. ಈ ಮುದ್ದು ಮುಖದ ಸುಂದರಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಅಂಜನಿಪುತ್ರ, ಚಮಕ್, ಯಜಮಾನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ರಶ್ಮಿಕಾಗೆ ಟಾಲಿವುಡ್ ಚಿತ್ರರಂಗ ಮಣೆ ಹಾಕಿತು. ಕಳೆದ ವರ್ಷದ ಮಹೇಶ್ ಬಾಬು ನಟನೆಯ ಸರಿಲೇರು ನಿಕ್ಕೆವರು ಚಿತ್ರ ಮತ್ತು ನಿತಿನ್ ಜೊತೆಗಿನ ಭಿಷ್ಮ ಸೂಪರ್ ಸಕ್ಸಸ್ ಕಂಡ ಮೇಲೆ ಸಾಲು ಸಾಲು ಅವಕಾಶಗಳ ಜೊತೆ ಬಾಲಿವುಡ್ ಅಂಗಳದ ಬಾಗಿಲು ತಟ್ಟಿದ ರಶ್ಮಿಕಾ, ಅಲ್ಲೂ ಶೈನ್ ಆಗ್ತಿದ್ದಾರೆ. ಟಾಪ್ ಟಕ್ಕರ್ ಆಲ್ಬಂ ಸಾಂಗ್‍ನಲ್ಲಿ ಕಾಣಿಸಿಕೊಂಡಿರೋ ಕಿರಿಕ್ ಬೆಡಗಿನ ಮೆಚ್ಚಿಕೊಂಡಿರುವ ಬಿಟೌನ್ ಮಂದಿ ಇನ್ನಷ್ಟು ಅವಕಾಶ ಕೊಡ್ತಿದ್ದಾರೆ.
ಸದ್ಯ `ಮಿಷನ್ ಮಜ್ನು’ ಚಿತ್ರದಲ್ಲಿ ಸಿದ್ದಾರ್ಥ ಮಲೋತ್ರಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಬಿಗ್‍ಬಿ ಜೊತೆ ಗುಡ್‍ಬೈ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ನಟನೆಯ ಪುಷ್ಪ, ತಮಿಳಿನ ಕಾರ್ತಿ ನಟನೆಯ ಸುಲ್ತಾನ್ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ಧಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಶ್ಮಿಕಾಗೆ ಚಿತ್ರರಂಗದ ಗಣ್ಯರು ಸೇರಿದಂತೆ, ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇನ್ನು ನಟ ರಕ್ಷಿತ್ ಶೆಟ್ಟಿ ಸಹ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಾಕುವ ಮೂಲಕ ರಶ್ಮಿಕಾಗೆ ವಿಶ್ ಮಾಡಿದ್ದಾರೆ.