ವಿದ್ಯುತ್, ಬಂದರುಗಳು, ಗಣಿಗಾರಿಕೆ, ಖಾದ್ಯ ತೈಲ ಮುಂತಾದ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ಹೊಂದಿರುವ ಅದಾನಿ ಸಮೂಹದ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ (Adhani) 118 ಬಿಲಿಯನ್ ಡಾಲರ್ (ಸುಮಾರು 9 ಲಕ್ಷ ಕೋಟಿ ರೂ.) ನಿವ್ವಳ ಮೌಲ್ಯದೊಂದಿಗೆ ಈಗ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.
ಅದಾನಿ ವೈಯಕ್ತಿಕ ಸಂಪತ್ತಿನಲ್ಲಿ ಕಳೆದ ಮೂರುವರೆ ತಿಂಗಳುಗಳಲ್ಲಿ ಸುಮಾರು 41.6 ಬಿಲಿಯನ್ ಡಾಲರ್ (3.16 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಹೀಗಾಗಿ ಅದಾನಿ ಈ ವರ್ಷ ವಿಶ್ವದಲ್ಲೇ ಅತೀ ಹೆಚ್ಚು ಸಂಪತ್ತು ಗಳಿಸಿದ ಉದ್ಯಮಿಯಾಗಿದ್ದಾರೆ. ಈತನ್ಮಧ್ಯೆ, ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಒಟ್ಟು ಸಂಪತ್ತು ಈಗ 97.4 ಬಿಲಿಯನ್ ಡಾಲರ್ (7.41 ಲಕ್ಷ ಕೋಟಿ ರೂ.) ಆಗಿದೆ. ಅವರು ಈಗ ಇತ್ತೀಚಿನ ಬ್ಲೂಮ್ಬರ್ಗ್ ಬಿಲಿಯನೇರ್ ಶ್ರೇಯಾಂಕದ ಪ್ರಕಾರ ವಿಶ್ವದ 11ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಇದನ್ನುಓದಿ- ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಭಟನೆ – ವಶಕ್ಕೆ ಪಡೆದ ಪೊಲೀಸರು
ಬ್ಲೂಮ್ಬರ್ಗ್ ಇಂಡೆಕ್ಸ್ ಪ್ರಕಾರ ಗೌತಮ್ ಅದಾನಿ ಪ್ರಸ್ತುತ ಅಂಬಾನಿಗಿಂತ 20.6 ಬಿಲಿಯನ್ ಡಾಲರ್ (1.57 ಲಕ್ಷ ಕೋಟಿ ರೂ.) ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಸದ್ಯಕ್ಕೆ ಅಂಬಾನಿಗೆ ಅದಾನಿಯನ್ನು ಹಿಂದಿಕ್ಕುವುದು ಕಷ್ಟ ಸಾಧ್ಯವಾಗಿದೆ.