ಹದಿಹರೆಯದ ವಯಸ್ಸಲ್ಲಿ ಪ್ರೀತಿ ಪ್ರೇಮ ಎಂದು ಅಕ್ಕ-ತಂಗಿ ಇಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಕಂದವಾರ ಕೆರೆಯಲ್ಲಿ ನಡೆದಿದೆ.
ಅಗಲಗುರ್ಕಿ ಗ್ರಾಮದ ಮುನಿಸ್ವಾಮಪ್ಪ ಹಾಗೂ ಲಕ್ಷ್ಮೀ ದಂಪತಿ ಪುತ್ರಿಯರಾದ 16 ವರ್ಷದ ಅಶ್ವಿನಿ ಹಾಗೂ 14 ವರ್ಷದ ನಿಶ್ಚಿತಾ ಮೃತರು. ಕಂದವಾರ ಕೆರೆಯಲ್ಲಿ ಭಾನುವಾರ ಮಧ್ಯಾಹ್ನ ಬಾಲಕಿಯ ಮೃತದೇಹ ತೇಲಾಡುತ್ತಿದ್ದನ್ನ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಸಂಜೆ ವೇಳೆಗೆ ಮತ್ತೊಂದು ಮೃತದೇಹ ಅದೇ ಜಾಗದಲ್ಲಿ ತೇಲಿಬಂದಿದೆ. 2 ಮೃತದೇಹಗಳನ್ನ ಆಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಚಿಕ್ಕಬಳ್ಳಾಪುರ ನಗರದ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.
ಇದನ್ನು ಓದಿ :- ಇದು ಶೇಖಾವತ್ ಎಂಬ ಖತರ್ನಾಕ್ ಕಳ್ಳನ ಇಂಟರೆಸ್ಟಿಂಗ್ ಸ್ಟೋರಿ..!
ಬಾಲಕಿಯರ ಸಾವಿನ ಹಿಂದೆ ಅಪ್ರಾಪ್ತ ಪ್ರೇಮ ಪ್ರಕರಣ ಬಯಲು
16 ವರ್ಷದ ಅಶ್ವಿನಿ ಸ್ವಗ್ರಾಮ ಅಗಲಗುರ್ಕಿಯ ಅಪ್ರಾಪ್ತ ಬಾಲಕನನ್ನ ಪ್ರೀತಿಸುತ್ತಿದ್ದಳಂತೆ, ಇದೇ ವಿಚಾರಕ್ಕೆ ಮನೆಯಲ್ಲಿ ತಂದೆ-ತಾಯಿ ಹಲವು ಬಾರಿ ಬೈದು ಬುದ್ದಿ ಹೇಳಿದ್ದರು.. ಅಪ್ರಾಪ್ತ ಬಾಲಕನಿಗೂ ಬುದ್ದಿ ಹೇಳಿದ್ದರು. ಆದ್ರೂ ಮೃತ ಅಶ್ವಿನಿ ಹಾಗೂ ಅಪ್ರಾಪ್ತ ಬಾಲಕ ಪ್ರೀತಿ –ಪ್ರೇಮ ಪ್ರಣಯ ಅಂತ ಶಾಲೆಗೆ ಹೋಗೋದು ಬಿಟ್ಟು ಸುತ್ತಾಡಿಕೊಂಡಿದ್ದರಂತೆ.
ಇನ್ನು ನಿನ್ನೆ ಅಪ್ರಾಪ್ತ ಬಾಲಕ ಇವರನ್ನ ಕರೆದುಕೊಂಡು ಹೋದನಾ ಇವರೇ ಸ್ವ ಇಚ್ಚೆಯಿಂದ ಹೋದರಾ? ಮಧ್ಯಾಹ್ನದ ಸಂಜೆವರೆಗೂ ನಗರದಲ್ಲಿ ಸುತ್ತಾಡಿ ಸಂಜೆ ಕೆರೆ ಕಡೆ ಹೋಗಿದ್ದಾರೆ. ಇಂದು ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ತಮ್ಮ ಮಕ್ಕಳ ಸಾವಿಗೆ ಅವನೇ ಕಾರಣ ಅಂತ ಮೃತ ಮಕ್ಕಳ ತಾಯಿ ಆರೋಪಿಸಿದ್ದಾರೆ.
ಇದನ್ನು ಓದಿ :- ಕೋರಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳು ಅರೆಸ್ಟ್