ವಿಜಯಪುರ(vijayapura) ದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗ್ಗೆ 2 ಬಾರಿ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದೆ.
ವಿಜಯಪುರದ ನಗರ, ಚಡಚಣ, ತಿಕೋಟ, ಬಸವನಬಾಗೇವಾಡಿ (basavanbhagewadi) ತಾಲೂಕಿನಾದ್ಯಂತ ಭೂಕಂಪ ಅನುಭವವಾಗಿದ್ದು, ಇಲ್ಲಿಯವರೆಗೆ ಇಷ್ಟು ಸದ್ದು ಆಗಿರಲಿಲ್ಲ ಎಂದು ಜನರು ಹೇಳಿದ್ದಾರೆ. 6:22 ಹಾಗೂ 6:24 ಕ್ಕೆ ಎರಡು ಬಾರಿ ಭೂಮಿ ಕಂಪಿಸಿದೆ. 6:22 ನಿಮಿಷಕ್ಕೆ 4.9 ತೀವ್ರತೆ, 6:24ಕ್ಕೆ 4.6 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದನ್ನೂ ಓದಿ :- ಅಮರನಾಥ ಮೇಘ ಸ್ಫೋಟದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಎಂ ಬಸವರಾಜ್ ಬೊಮ್ಮಾಯಿ
ವಿಜಯಪುರ ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರ(maharastra) ದ ಭಾಗದ ಮರಬಗಿ, ತಿಕ್ಕುಂಡಿ, ಜಾಲಿಹಾಳ ಮುಚ್ಚಂಡಿ ಗ್ರಾಮಗಳಲ್ಲಿ ಸುಮಾರ 10-15 ಸೆಕೆಂಡಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಗ್ರಾಮದಲ್ಲಿ ಭೂಕಂಪನದಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.
ಇದನ್ನೂ ಓದಿ : – ಅಮರನಾಥ ಮೇಘಸ್ಫೋಟ- ಸಾವಿನ ಸಂಖ್ಯೆ 15ಕ್ಕೆ ಏರಿಕೆ 40 ಮಂದಿ ನಾಪತ್ತೆ