ದೇಶ ಕಾಯುವ ಯೋಧರಿಗೆ ಅವಮಾನ ಮಾಡಿದ ಸರ್ಕಾರ ಅಂದ್ರೆ ಅದು ಬಿಜೆಪಿ (BJP) ಸರ್ಕಾರ. ಇಂಡಿಯನ್ ಆರ್ಮಿ ಗೆ ಬಹಳಷ್ಟು ಮಹತ್ವ ಇದೆ. ಈ ದೇಶವನ್ನು ಬರೀಬಾದ್ ಮಾಡಲಿಕ್ಕೆ ಹೊರಟಿದ್ದಾರೆ ಬಿಜೆಪಿ ಅವ್ರು ಎಂದು ಬಿಜೆಪಿ ವಿರುದ್ದ ಯೂತ್ ಕಾಂಗ್ರೆಸ್ ರಾಷ್ಟೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಕಿಡಿಕಾರಿದ್ದಾರೆ.
ಅಚ್ಚೇದಿನ್ ಎಲ್ಲಿದೆ ಮೋದಿ ಅಮಿತ್ ಷಾ ಅವ್ರೆ? ಜನರು ಪ್ರಶ್ನೆ ಕೇಳುತ್ತಿದ್ದಾರೆ ಉತ್ತರ ಕೊಡಿ ಎಂದು ಕೇಳಿದ್ದಾರೆ. ನೋಟ್ ಬ್ಯಾನ್ ಮಾಡಿದ್ರು ಉಪಯೋಗವಿಲ್ಲ. ಜಿ ಎಸ್ ಟಿ (GST) ತಂದ್ರು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಬೀದಿ ಪಾಲು ಮಾಡಿದ್ರು. ಬಿಜೆಪಿ ಅವ್ರೆ ಮೊದಲು ಹೇಗೆ ನೇಮಕಾತಿ ಇತ್ತು ಅದನ್ನೇ ಮಾಡಿ. ಇದನ್ನೂ ಓದಿ : – ಸುಭದ್ರ ಸರ್ಕಾರ ಉರುಳಿಸೋದು ಬಿಜೆಪಿಯವರಿಗೆ ಹವ್ಯಾಸವಾಗಿದೆ – ಟ್ವೀಟ್ ಮೂಲಕ ಖರ್ಗೆ ಆಕ್ರೋಶ
ಈ ದೇಶದ ಕೆಟ್ಟ ಮಗ ಅಂದ್ರೆ ಅದು ಪ್ರಧಾನಿ ಮೋದಿ ಅಮಿತ್ ಶಾ. 4 ವರ್ಷ ಮುಗಿದ ಮೇಲೆ ಈ ಯೋಜನೆಯಲ್ಲಿ ಕೆಲ್ಸಮಾಡಿದವರು ಪಕೋಡ ಮಾರಿ ಅಂತ ಹೇಳ್ತಾರೆ ಈ ಬಿಜೆಪಿ ಅವ್ರು. ನಮ್ಮನೆಲ್ಲ ಯಾಮಾರಿಸಿ ಈ ದೇಶವನ್ನೂ ಲೂಟಿ ಮಾಡೋಕೆ ಈ ಮೋದಿ ಅಮಿತ್ ಶಾ ಹೊರಟಿದ್ದಾರೆ. ನಾವೆಲ್ಲರೂ ಈ ಕಳ್ಳ ರಿಂದ ನಮ್ಮ ದೇಶವನ್ನೂ ಕಾಪಾಡಿಕೊಳ್ಳಬೇಕು. ನೀವು ನಿಜವಾದ ದೇಶ ಭಕ್ತರಾದ್ರೆ ಈ ಅಗ್ನಿ ಪಥ್ ಯೋಜನೆ ಹಿಂಪಡೆಯಿರಿ. ರಾಹುಲ್ ಗಾಂಧಿ ಅವರ ವಿರುದ್ಧ ED ಯಾಕೆ ಛೂ ಬಿಟ್ರು ಅಂದ್ರೆ ಅಗ್ನಿ ಪಥ್ ಯೋಜನೆ ವಿರುದ್ಧ ಹೋರಾಟ ಮಾಡ್ತಾರೆ ಅಂತ ಎಂದು ಕಿಡಿ ಕಾರಿದ್ರು.
ಇದನ್ನೂ ಓದಿ : – NDA ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ಹಿನ್ನೆಲೆ- ಸಿಎಂ ಚೌಹಾಣ್ ಡ್ಯಾನ್ಸ್ ವಿಡಿಯೋ ವೈರಲ್ !