ಜೆಡಿಎಸ್ ( JDS )ರಥಯಾತ್ರೆಯ ಇಂದು 18ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಗುಬ್ಬಿ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D KUMARASWAMY ) ಯಾತ್ರೆ ಮುಂದುವರೆಸಲಿದ್ದಾರೆ. ಯಶಸ್ವಿಯಾಗಿ ಶಿರಾ ಕ್ಷೇತ್ರದ ಪಂಚರತ್ನ ರಥಯಾತ್ರೆಯು ಮುಗಿದಿದೆ. ಇಂದು ಬೆಳಗಿನ ಜಾವ 4 ಗಂಟೆಗೆ ಶಿರಾ ಪಂಚರತ್ನ ರಥಯಾತ್ರೆ ಮುಗಿದಿದೆ.
ಶಿರಾ ಕ್ಷೇತ್ರದ ಬರಗೂರು ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆ ಹಾಗೂ ಬೃಹತ್ ಸಮಾವೇಶ ನಡೆಯಿತು. ಕ್ಷೇತ್ರದ ಎಲ್ಲ ಮುಖಂಡರು, ಜಿಲ್ಲಾ ನಾಯಕರು ಭಾಗಿಯಾಗಿದ್ದರು.#ಪಂಚರತ್ನ_ರಥಯಾತ್ರೆ#ಶಿರಾ #ತುಮಕೂರು pic.twitter.com/m9UUuHXFjq
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 5, 2022
ಶಿರಾ ಕ್ಷೇತ್ರದ ಹುಂಜನಾಳು ಗ್ರಾಮದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಿದ್ದರು.
ಇನ್ನೂ ಶಿರಾ ಪಟ್ಟಣದಲ್ಲಿ ಹೆಚ್.ಡಿ ಕುಮಾರಸ್ವಾಮಿ ಆಗಮನದ ವೇಳೆ ವಿವಿಧ ಹಾರಗಳ ಮೂಲಕ ಕಡಲೆಕಾಯಿ ಹಾರ, ಕ್ಯಾಪ್ಸಿಕಂ ಹಾರ, ಎಳನೀರು, ಮುಸುಕಿನ ಜೋಳದ ಹಾರ, ಹೂ ಮಳೆ ಸೂರಿಸಿ ಅದ್ದೂರಿಯಾಗಿ ಸ್ವಾಗತವನ್ನು ಅವರ ಬೆಂಬಲಿಗರು ಕೋರಿದರು.
ಸಮಾವೇಶಕ್ಕೂ ಮುನ್ನ ಅಮರಾಪುರಂ ವೃತ್ತದಲ್ಲಿ ನಡೆದ ರೋಡ್ ಕಾರ್ಯಕ್ರಮದ ಒಂದು ದೃಶ್ಯ.#ಪಂಚರತ್ನ_ರಥಯಾತ್ರೆ#ಶಿರಾ #ತುಮಕೂರು pic.twitter.com/uHRxS6IkOj
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 5, 2022
ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ ಊರಿನ ಜನರೇ ಸ್ವಂತ ಹಣ ಹಾಕಿ ಬೃಹತ್ ಕೊಬ್ಬರಿ ಹಾರ ಮಾಡಿ ಮಾಜಿ ಸಿಎಂಗೆ ಗ್ರಾಮಸ್ಥರು ಹಾರ ಹಾಕಿದರು. ಕೊಬ್ಬರಿ ಕಂಡು ಹೆಚ್ಡಿಕೆ ಭಾವುಕರಾದರು. ಇನ್ನೂ ಕೆಂಚಗಾನಹಳ್ಳಿ ಗ್ರಾಮದಲ್ಲಿ ಕೊತ್ತಂಬರಿ ಸೊಪ್ಪಿನ ಹಾರ ಕಂಡು ಹೆಚ್ಡಿಕೆ ಚಕಿತರಾದರು.
ಇದನ್ನೂ ಓದಿ : – ಕನ್ನಡಿಗರ ಹೋರಾಟಕ್ಕೆ ಬೆದರಿದ್ರಾ ಮಹಾ ಸಚಿವರು… ?