ಬಾಕ್ಸ್ ಆಫೀಸ್ ನಲ್ಲಿ ಅಕ್ಷಯ್ ಕುಮಾರ್ ದಾಖಲೆ ಉಡೀಸ್ ಮಾಡಿದ ದೃಶ್ಯಂ 2

ಬಾಲಿವುಡ್ (Bolly wood) ನ ಮೊದಲ ದಿನ ‘ದೃಶ್ಯಂ 2’ (Drishyam 2) ಚಿತ್ರ 15.38 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಅಕ್ಷಯ್ ಕುಮಾರ್ (Akshay kumar) ನಟನೆಯ ‘ರಾಮ್ ಸೇತು’ ಚಿತ್ರದ ಮೊದಲ ದಿನದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿದೆ. ದಕ್ಷಿಣದಲ್ಲಿ ಹಿಟ್ ಆದ ಅನೇಕ ಚಿತ್ರಗಳನ್ನು ಬಾಲಿವುಡ್ ರಿಮೇಕ್ ಮಾಡಲಾಗಿದೆ.

ಬಾಲಿವುಡ್ (Bolly wood) ನ ಮೊದಲ ದಿನ ‘ದೃಶ್ಯಂ 2’ (Drishyam 2) ಚಿತ್ರ 15.38 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಅಕ್ಷಯ್ ಕುಮಾರ್ (Akshay kumar) ನಟನೆಯ ‘ರಾಮ್ ಸೇತು’ ಚಿತ್ರದ ಮೊದಲ ದಿನದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿದೆ. ದಕ್ಷಿಣದಲ್ಲಿ ಹಿಟ್ ಆದ ಅನೇಕ ಚಿತ್ರಗಳನ್ನು ಬಾಲಿವುಡ್ ರಿಮೇಕ್ ಮಾಡಲಾಗಿದೆ. ಈ ಪೈಕಿ ಕೆಲವೇ ಕೆಲವು ಚಿತ್ರಗಳು ಗೆಲುವು ಕಂಡಿವೆ. ನವೆಂಬರ್ 18ರಂದು ರಿಲೀಸ್ ಆದ ‘ದೃಶ್ಯಂ 2’ ಸಿನಿಮಾ ಗೆಲ್ಲುವ ಸೂಚನೆ ಕೊಟ್ಟಿದೆ.

ಅಜಯ್ ದೇವಗನ್ (Ajay devgan) ನಟನೆಯ ಈ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಈ ಚಿತ್ರದಿಂದ ಬಾಲಿವುಡ್ ಗೆ ಹೊಸ ಚೇತರಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಮಲಯಾಳಂನಲ್ಲಿ ‘ದೃಶ್ಯಂ’ ಚಿತ್ರ ಹಿಟ್ ಆಯಿತು. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಇದನ್ನು ಹಿಂದಿಗೂ ರಿಮೇಕ್ ಮಾಡಲಾಗಿತ್ತು. ಆ ಚಿತ್ರ ಗೆದ್ದಿತ್ತು. ನಂತರ ಮಲಯಾಳಂನಲ್ಲಿ ‘ದೃಶ್ಯಂ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗಿದೆ. ಅಜಯ್ ದೇವಗನ್, ಇಶಿತಾ ದತ್, ಅಕ್ಷಯ್ ಖನ್ನಾ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 18ರಂದು ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಮೊದಲ ದಿನ ‘ದೃಶ್ಯಂ 2’ ಚಿತ್ರ 15.38 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಚಿತ್ರದ ಮೊದಲ ದಿನದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿದೆ. ಇದನ್ನೂ ಓದಿ : – 400 ಕೋಟಿ ಕ್ಲಬ್ ಸೇರಿ ದಾಖಲೆ ಬರೆದ ‘ಕಾಂತಾರ’

ಇಂದು ಹಾಗೂ ನಾಳೆ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಈ ಚಿತ್ರದಿಂದ ಬಾಲಿವುಡ್ ಗೆ ಹೊಸ ಚೈತನ್ಯ ಸಿಗುವ ಸೂಚನೆ ಸಿಕ್ಕಿದೆ. ಇತ್ತೀಚೆಗೆ ಸಾಲು ಸಾಲು ಬಾಲಿವುಡ್ ಸಿನಿಮಾಗಳು ಸೋಲು ಕಾಣುತ್ತಿವೆ. ಬೆರಳೆಣಿಕೆ ಚಿತ್ರಗಳು ಗೆದ್ದಿವೆ. ‘ಬ್ರಹ್ಮಾಸ್ತ್ರ’ ಸೇರಿ ಕೆಲವೇ ಕೆಲವು ಚಿತ್ರಗಳು ನೂರು ಕೋಟಿ ರೂಪಾಯಿ ಕ್ಲಬ್ ಸೇರಿವೆ. ಈಗ ‘ದೃಶ್ಯಂ 2’ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ : –  ಉದ್ಯಮಿ Zerodha ಸಹ ಸಂಸ್ಥಾಪಕ ನಿಖಿಲ್ ಜೊತೆ ಮಾನುಷಿ ಚಿಲ್ಲರ್ ಡೇಟಿಂಗ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!