ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವನ್ನ ಅಕ್ಷಯ ತೃತೀಯವನ್ನಾಗಿ ಆಚರಿಸಲಾಗುತ್ತೆ. ಈ ದಿನ ಹಿಂದೂಗಳಿಗೆ ತುಂಬಾ ಮುಖ್ಯವಾದ ದಿನ.
ಚಿನ್ನ ಬೆಳ್ಳಿ ಕೊಳ್ಳಲು, ಆಸ್ತಿ ಖರೀದಿಸಲು, ವಾಹನ ಖರೀದಿಸಲು ತುಂಬಾ ಶುಭವೆಂದು ಈ ದಿನವನ್ನು ಪರಿಗಣಿಸಲಾಗಿದೆ. ಕಳೆದ 2 ವಷಗಳಿಂದ ಕೊರೊನಾದಿಂದಾಗಿ ಅಕ್ಷಯ ತೃತೀಯಾವನ್ನು ಜನರು ಆಚರಣೆ ಮಾಡಿರಲಿಲ್ಲ. ಇದನ್ನೂ ಓದಿ :- ರಾಣಾ ದಂಪತಿಗೆ ಹಿನ್ನಡೆ – ಎಫ್ ಐ ಆರ್ ರದ್ದುಗೊಳಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ವಜಾ
ಈ ಬಾರಿ ಕೊರೊನಾ ಸಂಖ್ಯೆ ಕಡಿಮೆ ಇರೋದ್ರಿಂದ ಜನ ಚಿನ್ನ ಖರೀದಿಗೆ ಮುಗಿದಿದ್ದಾರೆ. ಕೆಲವರು ಅಂದು ಖರೀದಿಸಲು ಚಿನ್ನ, ಆಸ್ತಿ, ವಾಹನಗಳನ್ನ ಬುಕ್ ಮಾಡಿದ್ದಾರೆ. ಇನ್ನು ಹೆಂಗಳೆಯರು ಚಿನ್ನ ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನದ ಅಂಗಡಿಗೆ ಲಗ್ಗೆ ಇಟ್ಟಿದ್ದಾರೆ.
ಚಿನ್ನದ ಅಂಗಡಿಗಳಿಗೂ ಹೊಸ ಹೊಸ ಡಿಸೈನ್ ಗಳು ಬಂದಿವೆ. ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡಿವೆ. 2 ವರ್ಷದಿಂದ ಚಿನ್ನ ಖರೀದಿಸದವರು ಈ ಬಾರಿ ಚಿನ್ನ ಖರೀದಿಯ ಸಂಭ್ರಮದಲ್ಲಿದ್ದಾರೆ.
ಇದನ್ನೂ ಓದಿ :- ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವಿಚಾರ – ಜಿಗ್ನೇಶ್ ಮೇವಾನಿಗೆ ಕೊನೆಗೂ ಜಾಮೀನು