ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕರ್ನಾಟಕ ( karanataka ) ಸರ್ಕಾರವು ಯಾವುದೇ ಪರಿಹಾರ ನೀಡದೇ 6,500 ಕಾರ್ಯಕರ್ತೆಯರನ್ನು ವಜಾ ಮಾಡಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಕಾರ್ಯಕರ್ತೆಯರು ದೂರಿದ್ದಾರೆ.
ಸರ್ಕಾರದ ನಡೆಯನ್ನು ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ಆರಂಭವಾಗಿದೆ. ಸಿಐಟಿಯು (Centre of Indian Trade Unions – CITU) ನಾಯಕಿ ವರಲಕ್ಷ್ಮೀ ನೇತೃತ್ವದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ ರಾಜ್ಯಾದ್ಯಂತ ಬಿಸಿಯೂಟ ಸೇವೆ ಬಂದ್ ಆಗಿದೆ. 60 ವರ್ಷ ವಯಸ್ಸಾಗಿದೆ ಎನ್ನುವುದನ್ನೇ ದೊಡ್ಡದು ಮಾಡಿ, ಯಾವುದೇ ಪರಿಹಾರ, ನಿವೃತ್ತ ವೇತನಕ್ಕೆ ವ್ಯವಸ್ಥೆ ಮಾಡದೇ ಬೀದಿಗೆ ತಳ್ಳಲಾಗಿದೆ. ಕಾರ್ಯಕರ್ತೆಯರಿಗೆ ಕಡ್ಡಾಯ ನಿವೃತ್ತಿ ನಿರ್ಧಾರ ಜಾರಿಗೆ ತರುವ ಸರ್ಕಾರದ ತೀರ್ಮಾನದಿಂದ ಬಿಸಿಯೂಟ ಕಾರ್ಯಕರ್ತೆಯರ ಬದುಕು ಬಡವಾಗಿದೆ. ಇದನ್ನೂ ಓದಿ : – ಪಿಜ್ಜಾ ಹಿಟ್ಟಿನ ಮೇಲೆ ಶೌಚಾಲಯ ಬ್ರಷ್,ಪೊರಕೆ..! ಇದು ಬೆಂಗಳೂರಿನ ಡೊಮಿನೊಸ್ ಬ್ರಾಂಚ್ ಕರ್ಮಕಾಂಡ
ಸರ್ಕಾರ ತಕ್ಷಣ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರು ನಗರಕ್ಕೆ ಆಗಮಿಸಿದ್ದಾರೆ. ಮಕ್ಕಳೊಂದಿಗೆ ಎರಡು ಮೂರು ದಿನಗಳಿಗೆ ಆಗುವಷ್ಟು ಬಟ್ಟೆಯನ್ನೂ ತಂದಿದ್ದು, ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ : – ಬಿಜೆಪಿಗೆ ಕಾಮಾಲೆ ರೋಗ ಬಂದಿದೆ – ಈಶ್ವರಪ್ಪ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ