ತುಮಕೂರಿ (Tumakuru) ಗೆ ಜೆಡಿಎಸ್ (JDS) ಪಂಚರತ್ನ ರಥಯಾತ್ರೆ (Pancharatba yatre) ಎಂಟ್ರಿ ಕೊಟ್ಟಿದೆ. ತುಮಕೂರು ನಗರದಲ್ಲಿ ರಥಯಾತ್ರೆ ಪ್ರಾರಂಭ ಮಾಡುವ ಮುನ್ನ ಸಿದ್ದಗಂಗಾ ಮಠಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ (Kumarswamy) ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಪಂಚರತ್ನ ರಥಯಾತ್ರೆ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ರು. ಬಿಜೆಪಿ (BJP) ಕಾರ್ಯಕ್ರಮಗಳಲ್ಲಿ ರೌಡಿಶೀಟರ್ ಗಳು ಭಾಗಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ ನಾನು ಅದಕ್ಕೆಲ್ಲ ಪ್ರಾಮುಖ್ಯತೆ ಕೊಡಲ್ಲ.
ಪಂಚರತ್ನ ಯಾತ್ರೆ ಮೂಲಕ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಕೊಡೋದು ನನ್ನ ಗುರಿ. ಯಾರ ಪಕ್ಷದಲ್ಲಿ ಯಾರನ್ನ ಸೇರಿಸಿಕೊಳ್ತಾರೆ, ಯಾರನ್ನ ಕಳುಹಿಸ್ತಾರೆ ಅನ್ನೋದು ನನಗೆ ಬೇಡದ ವಿಚಾರ ಎಂದು ಹೇಳಿದ್ರು.
ತುಮಕೂರು ನಗರ ಕ್ಷೇತ್ರದಲ್ಲಿ ಟಿಕೆಟ್ ಗೊಂದಲ ವಿಚಾರ ಕುರಿತಂತೆ ಮಾತನಾಡಿ ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತ ಗೋವಿಂದರಾಜು ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಗೋವಿಂದರಾಜು (Govinadraju) ಗೆ ಟಿಕೆಟ್ ಕೊಡೋದು ತೀರ್ಮಾನ ಆಗಿದೆ. ಈ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ರು. ತಿಪಟೂರಿಗೆ ಸೂಕ್ತ ಅಭ್ಯರ್ಥಿಯನ್ನ ಹಾಕಲಾಗುವುದು.
ಈ ಬಾರಿ ಶಿರಾದಲ್ಲಿಯೂ ಜೆಡಿಎಸ್ ಗೆಲ್ಲುತ್ತೆ. ತುಮಕೂರು ಜಿಲ್ಲೆಯ 11 ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಅತಂತ್ರ ಫಲಿತಾಂಶ ಬರುವ ಪ್ರಶ್ನೆಯೇ ಇಲ್ಲ.
123 ಸ್ಥಾನ ಗಳಿಸಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತೆ. ಹಂತ ಹಂತವಾಗಿ ಇಡೀ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಹೋಗುತ್ತೆ. ರಾಜಕೀಯದ ಸುನಾಮಿ ಅಲೆ, ಜೆಡಿಎಸ್ ಪರವಾಗಿ ಎದ್ದಿದ್ದು ಎಲ್ಲಾ ರಾಜಕೀಯ ಪಕ್ಷಗಳು ಕೊಚ್ಚಿ ಹೋಗುತ್ತದೆ ಎಂದು ಹೇಳಿದ್ರು. ಇದನ್ನೂ ಓದಿ : – ನಾಗ ಯಾರು, ತಿಮ್ಮ ಯಾರು, ಬೊಮ್ಮಾ ಯಾರು ನನಗೆ ಗೊತ್ತಿಲ್ಲ- ಸೋಮಣ್ಣ ಸ್ಪಷ್ಟನೆ
ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಫರ್ಧೆ ಮಾಡುವ ವಿಚಾರ
ವರುಣದಲ್ಲೂ (Siddaramaiah) ಕೂಡಾ ನಮ್ಮ ಅಭ್ಯರ್ಥಿ ತಯಾರಾಗಿದ್ದಾರೆ. ವರುಣದಿಂದ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರ್ತಿವಿ ಎಂದು ಕುಮಾರಸ್ವಾಮಿ ತಿಳಿಸಿದ್ರು.
ಇದನ್ನೂ ಓದಿ : – ಇಂದಿನಿಂದ ತುಮಕೂರಿನಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ