ಸಾರಿಗೆ ಅಧಿಕಾರಿಗಳ ನೋಟಿಸ್ (Notice) ಗೆ ಕ್ಯಾರೆ ಎನ್ನದೇ ಹೋದ್ರೆ ಅಂತಹ ವಿಚಾರಕ್ಕೆ ಶ್ರೀರಾಮುಲು (Sri ramulu) ಜಗ್ಗಲ್ಲ. ಕಾನೂನು ಬಾಹಿರ ಕೆಲಸ ಮಾಡಿದ್ರೆ ಸಹಿಸುವುದಿಲ್ಲ. ಯಾರೇ ಆದ್ರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅವಕಾಶ ಸಿಕ್ಕರೆ ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ (Auto) ಸೇವೆಗೆ ಅವಕಾಶ ಮಾಡಿಕೊಡುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
2021ರ ಮಾರ್ಚ್ ನಲ್ಲಿ ಓಲಾ ( OLA) , ಉಬರ್ (UBER) ಲೈಸೆನ್ಸ್ ಅವಧಿ ಮುಗಿದಿದೆ. ಅವಧಿ ಮುಗಿದ್ರು ಓಲಾ, ಉಬರ್ ಆ್ಯಪ್ ಮುಂದುವರಿದಿವೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡುತ್ತಿದ್ದೇನೆ. ಅವಧಿ ಮುಗಿದ್ರೂ ಗಾಡಿ ಓಡಾಡಿದ್ರೆ ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಅವಕಾಶ ಸಿಕ್ರೆ ಸರ್ಕಾರದಿಂದ ಆ್ಯಪ್ ಮಾಡಿ ಕೊಡುತ್ತೇವೆ. ಓಲಾ, ಉಬರ್ ಗೆ ಸಾರಿಗೆ ಅಧಿಕಾರಿಗಳು 3 ಬಾರಿ ನೋಟಿಸ್ ಕೊಡಲಾಗಿದೆ. ನೋಟಿಸ್ ಗೆ ಕ್ಲಾರಿಫಿಕೇಷನ್ ಕೊಡಬೇಕಿತ್ತು. ಲೈಸೆನ್ಸ್ ಕೊಡುವ ವೇಳೆ ಓಲಾ, ಉಬರ್ ಗೆ ಕಂಡೀಷನ್ ಮಾಡಲಾಗಿತ್ತು. ಆಟೋ ಪರವಾನಿಗೆ ಇಲ್ಲದೇ ಓಲಾ, ಉಬರ್ ಓಡಿಸುತ್ತಿದ್ರು. ಸರ್ಕಾರಕ್ಕೆ ಗೊಂದಲ ಮೂಡಿಸುತ್ತಿದ್ದಾರೆ. ಹೀಗಾಗಿ ಓಲಾ, ಉಬರ್ ಆ್ಯಪ್ಗೆ ಮಾತ್ರ ತಡೆ ಇಡಲಾಗಿದೆ. ಬೇರೆ ಬೇರೆ ಟ್ಯಾಕ್ಸಿ, ಆಟೋಗಳು ಓಡಾಡಬಹುದು ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ :- ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್ ನವರು ತತ್ತರಿಸಿ ಹೋಗಿದ್ದಾರೆ – ಸಿಎಂ ಬೊಮ್ಮಾಯಿ