ಅನಂತ್ ಅಂಬಾನಿ ನಿಶ್ಚಿತಾರ್ಥ – ಸ್ಟೇಜ್ ಮೇಲೆ ಹೆಜ್ಜೆ ಹಾಕಿದ ಅಂಬಾನಿ ಕುಟುಂಬ

ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ( MUKEESH AMBANI)ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ ಗುರುವಾರ ಕೈಗಾರಿಕೋದ್ಯಮಿ ವೀರೇನ್ ಮಂರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ನೆರವೇರಿದೆ.

ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ (MUKEESH AMBANI)ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ ಗುರುವಾರ ಕೈಗಾರಿಕೋದ್ಯಮಿ ವೀರೇನ್ ಮಂರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ (RADHIKA MARCHET )ಅವರೊಂದಿಗೆ ನೆರವೇರಿದೆ. ಈ ಸಂಭ್ರಮದ ಗಳಿಗೆಯಲ್ಲಿ ಅಂಬಾನಿ ಕುಟುಂಬ ಸ್ಟೇಜ್ ಮೇಲೆ ಹೆಜ್ಜೆ ಹಾಕಿ ಜೋಡಿಗೆ ಶುಭಹಾರೈಸಿದೆ.

ಗುರುವಾರ ಅನಂತ್ ಅಂಬಾನಿ (ANANT AMBANI) ಹಾಗೂ ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಸಾಂಪ್ರದಾಯಿಕ ರೀತಿಯಲ್ಲಿ ಅಂಬಾನಿ ಕುಟುಂಬದ ಮನೆಯಾದ ಆಂಟಿಲಿಯಾದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ. ಮುಖೇಶ್ ಹಿರಿಯ ಮಗ ಆಕಾಶ್ ಅಂಬಾನಿ, ಪತ್ನಿ ಶ್ಲೋಕಾ ಮೆಹ್ತಾ ಹಾಗೂ ಮುಖೇಶ್ ಪುತ್ರಿ ಇಶಾ ಅಂಬಾನಿ ಮತ್ತು ಅವರ ಪತಿ ಆನಂದ್ ಪಿರಮಾಲ್ ಅವರೊಂದಿಗೆ ಜೊತೆಯಾಗಿ ನೃತ್ಯ ಮಾಡಿದ್ದಾರೆ. ‘ಹಮ್ ಆಪ್ಕೆ ಹೈ ಕೌನ್’ ಚಿತ್ರದ ‘ವಾಹ್ ವಾಹ್ ರಾಮ್ಜಿ’ ಹಾಡಿಗೆ ಅಂಬಾನಿ ಕುಟುಂಬ ಹೆಜ್ಜೆ ಹಾಕಿದೆ. ಈ ಮೂಲಕ ಕುಟುಂಬದ ಕಿರಿಯ ಪುತ್ರನ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಇದನ್ನು ಓದಿ :- ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಡಿ.ಸಿ.ಎಂ ಜಿ.ಪರಮೇಶ್ವರ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!