ಬೆಂಗಳೂರು ಹೊರವಲಯದಲ್ಲಿ ಪದೇ ಪದೇ ಪೋಲೀಸರು ರೇವ್ ಪರ್ಟಿಗಳ ಮೇಲೆ ರೇಡ್ ಮಾಡ್ತಾನೆ ಇರ್ತಾರೆ. ಆದರೆ ರೇವ್ ಪಾರ್ಟಿ ಆಯೋಜನೆಗಳು ಮಾತ್ರ ಕಡಿಮೆಯಾಗಿಲ್ಲ. ನೆನ್ನೆ ತಡರಾತ್ರಿ ರೇವ್ ಪಾರ್ಟಿ ನಡೆಯುತ್ತಿರುವುದು ಆನೇಕಲ್ ಪೋಲಿಸರಿಗೆ ಮಾಹಿತಿ ತಿಳಿದಿದೆ ಹಾಗಾಗಿ ಆನೇಕಲ್ ಪೋಲಿಸರು ದಾಳಿ ನಡೆಸಿದ್ದಾರೆ.
ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳು ಸೇರಿದಂತೆ 14 ಜನರನ್ನ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜೊತೆಗೆ 7 ಕಾರುಗಳು 16 ಬೈಕ್ ಗಳನ್ನ ಸೀಜ್ ಮಾಡಲಾಗಿದೆ.
ಹಸಿರು ವ್ಯಾಲಿಯ ರೆಜಾರ್ಟ್ನಲ್ಲಿ ಪಾರ್ಟಿ ನಡೆಯುತ್ತಿತ್ತು. ಇನ್ನು ರೆಜಾರ್ಟ್ನ ಮಾಲೀಕ ಶ್ರೀನಿವಾಸ್ ನಾಪತ್ತೆಯಾಗಿದ್ದಾನೆ. ಆಥಿಠಿ ಮಲ್ಲೇಶ್ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು, ವಶಕ್ಕೆ ಪಡೆದ ಎಲ್ಲರನ್ನು ವೈದ್ಯಕೀಯ ಪರೀಕ್ಷೆಗೆ ಅಳವಡಿಸುವುದಾಗಿ ಆನೇಕಲ್ ಪೊಲೀಸರು ತಿಳಿಸಿದ್ದಾರೆ.