ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆ ಬರುವ ಸಾಧ್ಯತೆ ಇದೆ – ಗೌರವ್‌ ಗುಪ್ತ

ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಸೂಚನೆಯಂತೆ ಇನ್ನೂ 2 ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಬೆಂಗಳೂರಿನ ಕಾಮಾಕ್ಯ , ಉತ್ತರಹಳ್ಳಿ ಭಾಗದಲ್ಲಿ ಕೇವಲ 2 ಗಂಟೆಯಲ್ಲಿ 30 ಎಮ್ ಎಮ್ ಅಧಿಕ ಮಳೆಯಾಗಿದೆ. ನಾವು ನಮ್ಮ ಎಲ್ಲ ತಂಡಗಳಿಗೆ ಹೆಚ್ಚಿನ ನಿಗಾ ವಹಿಸುವಂತೆ ಅಲರ್ಟ್ ಮಾಡಿದ್ದೇವೆ. ನಿನ್ನೆ ರಾತ್ರಿ 10 ಗಂಟೆಗೆ ಉತ್ತರ ಹಳ್ಳಿಯಲ್ಲಿ ಬ್ಲಾಕ್ ಫ್ಲೋ ಹೆಚ್ಚಾಗಿತ್ತು.

ಅಲ್ಲಿ‌ತಕ್ಷಣ ಕಾರ್ಯ ನಿರ್ವಹಿಸುವಂತೆ ತಿಳಿಸಿದ್ದೇವೆ. ಮಳೆ ಸಮಯದಲ್ಲಿ ಬೀಳುವ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ತಿಳಿಸಲಾಗಿದೆ . 2007 ರಿಂದ ಬಿ ಖಾತ ಸಮಸ್ಯೆ ಶುರುವಾಗಿದೆ. ಹೊಸ ಏರಿಯಾಗಳು ಬಿಬಿಎಂಪಿಗೆ ಸೇರ್ಪಡೆಗೊಂಡ ಹಿನ್ನೆಲೆ ಈ ಸಮಸ್ಯೆ ಆಗಿದೆ. ಆ ದಿನದ ನಿಯಮಗಳಿಗೆ ತಕ್ಕ ಹಾಗೆ ಬಿ ಖಾತಾ ಫಾರ್ಮೆಟ್ ಮಾಡಲಾಗಿತ್ತು. ಬಿ ಖಾತಾ ಹಾಗೆ ಉಳಿಯ‌ಬಾರ್ದು ಅನ್ನೋ ನಿರ್ಧಾರ ಸರ್ಕಾರ ಮಾಡಿದೆ . ಸರ್ಕಾರ ನೀಡಿರುವ ನಿಯಮಗಳಿಗೆ ಅನುಸಾರವಾಗಿ ಎ ಖಾತಾ ಮಾಡಲಾಗುವುದು. ಇದನ್ನೂ ಓದಿ :-ಪಿಎಸ್ಐ ಪರೀಕ್ಷಾ ಅಕ್ರಮ – ಪ್ರಭಾವಿ ಸಚಿವರ ಕೈವಾಡ ಎಂದ ಡಿಕೆಶಿ

ಬೆಂಗಳೂರಿನಲ್ಲಿ 6 ಲಕ್ಷಕ್ಕಿಂತ ಹೆಚ್ಚು ಬಿ ಖಾತಾ ಪ್ರಾಪರ್ಟಿ ಇದೆ. ಕಸಾಯಿ ಖಾನೆ ವಿಚಾರವಾಗಿ ಪೊಲ್ಯುಷನ್ ಕಂಟ್ರೋಲ್ ಬೋರ್ಡ್ ನೀಡಿದ ನೋಟಿಸ್ ಗೆ ಉತ್ತರ ನೀಡಲಾಗಿದೆ. ಕಸಾಯಿಖಾನೆಯಲ್ಲಿ ಉತ್ಪಾದನೆ ಆಗುತ್ತಿದ್ದ ತ್ಯಾಜ್ಯ ನಿರ್ವಹಣೆ ಬಗ್ಗೆ ತಂತ್ರಿಕವಾಗಿ ಕ್ರಮ ಕೈಗೊಳ್ಳಲಾಗುವುದು. ಸೈಟಿಫಿಕ್ ಆಗಿರೋ ಲೇಟೆಸ್ಟ್ ಟೆಕ್ನಾಲಜಿ ಬಳಸಿ ತ್ಯಾಜ್ಯ ನಿರ್ವಾಹಣೆ ಮಾಡಲಾಗುವುದು. ಈ ಬಗ್ಗೆ ನಾವು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಿದ್ದೇವೆ. ಅವರ ಒಪ್ಲಿಗೆ ನಂತರ ಕೆಲಸ ಆರಂಭಿಸಲಾಗುವುದು ಎಂದು ಗೌರವ್‌ ಗುಪ್ತ ತಿಳಿಸಿದ್ರು.

ಇದನ್ನೂ ಓದಿ :- PSI ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಬಂಧನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!