ಕರ್ನಾಟಕದಲ್ಲಿ ಬಿಜೆಪಿ (BJP) ಯ ಸರ್ವೋಚ್ಚ ನಾಯಕ ಬಿಎಸ್ ವೈ ಎಂದು ಮತ್ತೊಮ್ಮೆ ಕೇಂದ್ರದ ನಾಯಕರು ಸಾಬೀತು ಮಾಡಿದ್ದಾರೆ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ (MP.Renukacharya) ಹೇಳಿದ್ದಾರೆ. ಬೆಂಗಳೂರಿ (Bengaluru) ನಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ (Modi) ನಡ್ಡಾರವರನ್ನ ಅಭಿನಂದಿಸುತ್ತೇನೆ.
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದದ್ದು ಜನರಿಗೆ ಗೊತ್ತಿದೆ. ಅಭಿವೃದ್ಧಿ ಅಂದ್ರೆ ಯಡಿಯೂರಪ್ಪ, ಬಿಜೆಪಿಯ ಅಭಿವೃದ್ಧಿಗೆ ಇನ್ನೊಂದು ಹೆಸರು ಯಡಿಯೂರಪ್ಪ ಎಂದು ಕೊಂಡಾಡಿದರು . ಯಡಿಯೂರಪ್ಪ (Yediyurappa) ನವ್ರು ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ರು. ಯಡಿಯೂರಪ್ಪ ನವ್ರನ್ನ ಹೊಗಳುವ ಮೂಲಕ ಬಿಜೆಪಿಯನ್ನ ಇಬ್ಬಾಗವಾಗುವಂತೆ ಕಾಂಗ್ರೆಸ್ ಮಾತ್ನಾಡಿದ್ರು. ಬಿಜೆಪಿ ಅಧಿಕಾರಕ್ಕೆ ಬರ್ಬೇಕು ಅಂತ ಮಂತ್ರಾಲಯದಲ್ಲಿ ಯಡಿಯೂರಪ್ಪ ನವ್ರು ಸಂಕಲ್ಪ ಮಾಡಿದ್ರು. ಏನೇ ಹೇಳಿದ್ರು ಯಡಿಯೂರಪ್ಪ ನವ್ರು ತಾಳ್ಮೆಯನ್ನ ಕಳೆದುಕೊಳ್ಳಲಿಲ್ಲ. ಯಡಿಯೂರಪ್ಪನವರಿಗೆ ಕಾಂಗ್ರೆಸ್ ನವ್ರು ಎಂದಿಗೂ ಸಾಟಿ ಇಲ್ಲ. ಯಡಿಯೂರಪ್ಪ ಸೈಡ್ ಲೈನ್ ಆದ್ರು, ರಾಜಕೀಯ ಭವಿಷ್ಯ ಮುಗಿದೇ ಹೋಯಿತು ಎಂಬುವವರಿಗೆ ರಾಷ್ಟ್ರ ನಾಯಕರು ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ನವ್ರು ಭಯಭೀತರಾಗಿದ್ದಾರೆ. ಯಡಿಯೂರಪ್ಪ ನವ್ರಿಗೆ ಹುದ್ದೆ ಮುಖ್ಯವಲ್ಲ. ಸಂಘಪರಿವಾರಕ್ಕೆ ಸಾಮಾನ್ಯ ಕಾರ್ಯಕರ್ತರಾಗಿ ಬಂದವ್ರು. ಅವಮಾನ, ಅಪಮಾನ ಆದ್ರೂ ಸಮನಾಗಿ ಸ್ವೀಕರಿಸಿದವ್ರು. ಏನು ಇಲ್ಲದೇ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಯಡಿಯೂರಪ್ಪ ಬಲಗೈ ಬಂಟ ಅಂತ ಮಾಧ್ಯಮದವ್ರು ಹೇಳ್ತಾರೆ. ಇದನ್ನೂ ಓದಿ : – ಸಿದ್ದರಾಮಯ್ಯ ಹೇಳಿಕೆ ದುರದೃಷ್ಟಕರ ಸಂಗತಿ – ಡಾ.ಕೆ ಸುಧಾಕರ್
ಅವ್ರು ಇಲ್ಲದ ವಿಧಾನಸೌಧ ನೋಡಲು ನನಗೆ ಸಾಧ್ಯವಿಲ್ಲ.ನಮ್ಮ ಮನೆಗೆ ಬಂದಾಗ ಕಾರ್ಯಕರ್ತರು ಕಣ್ಣೀರು ಹಾಕಿದ್ರು. ಮಾಜಿ ಮುಖ್ಯಮಂತ್ರಿಯಾಗಿ ಪಕ್ಷ ಕಟ್ಟಿದ್ರು. ಬಿಜೆಪಿ ಅಧಿಕಾರಕ್ಕೆ ಬರ್ಬೇಕು ಮೋದಿ, ಅಮಿತ್ ಶಾ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ರು. ಅವರ ತಾಳ್ಮೆ ಗೆ ಹೈಕಮಾಂಡ್ ಉತ್ತಮ ನಿರ್ಧಾರ ತೆಗೆದುಕೊಂಡಿದೆ ಎಂದು ಎಂ ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
ಇದನ್ನೂ ಓದಿ : – ಬಿಜೆಪಿಯವರ ಬಯಕೆ ಶ್ರೀರಾಮುಲು ಹೇಳಿಕೆಯಿಂದ ವ್ಯಕ್ತವಾಗಿದೆ – ಕಾಂಗ್ರೆಸ್ ಟ್ವೀಟ್