ಕ್ರಿಕೆಟ್ ಬುಕ್ಕಿ , ಕಿಂಗ್ ಪಿನ್ ಆದ ಮಲ್ಲಿಕಾರ್ಜುನ್ (Mallikarjun) ( ಫೈಟರ್ ರವಿ) ಬಿಜೆಪಿ (BJP) ಗೆ ಸೇರ್ಪಡೆಯಾಗಿದ್ದಾರೆ. ನಾಗಮಂಗಲ (Nagamangala) ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಬಯಸಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರೌಡಿಶೀಟರ್ ಗಳು ಬುಕ್ಕಿಗಳ ಸೇರ್ಪಡೆಯಿಂದ ಬಿಜೆಪಿ ಯಾವ ಮೆಸೇಜ್ ಕೊಡೋಕೆ ಹೊರಟಿದೆ ಎಂಬ ಪ್ರಶ್ನೆ ಎದುರಾಗಿದೆ.
ನಿನ್ನೆ ಬಿಜೆಪಿ ನಾಯಕರ ಜೊತೆ ಸೈಲೆಂಟ್ ಸುನೀಲ್ ದೊಡ್ಡ ಪ್ರೋಗ್ರಾಂ ಮಾಡಿದ್ದರು. ಇಂದು ಬುಕ್ಕಿ ಫೈಟರ್ ರವಿಯಿಂದ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಫೈಟರ್ ರವಿ ರೌಡಿಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ : – ಮೆಟ್ರೋ ರೈಲು ಪ್ರಯಾಣದ ಖುಷಿ ಅನುಭವಿಸಿದ ಅಭಿಷೇಕ್ ಅಂಬರೀಶ್
ಸಚಿವ ಅಶ್ವಥ್ ನಾರಾಯಣ್, ಗೋಪಾಲಯ್ಯ, ಸಿ.ಪಿ ಯೋಗೇಶ್ವರ್ ಸಮ್ಮುಖದಲ್ಲಿ ಫೈಟರ್ ರವಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ : – ಮದುವೆ ಡೇಟ್ ಅನೌನ್ಸ್ ಮಾಡಿದ ನಟಿ ಕಿಯಾರಾ ಅಡ್ವಾಣಿ…!