ನಟ ಪುನೀತ್ ರಾಜ್ ಕುಮಾರ್ ಅವರನ್ನು ಅನೇಕರು ದೇವರಂತೆ ಕಾಣುತ್ತಾರೆ. ಅಪ್ಪು ಮಾಡಿದ ಸಾಮಾಜಿಕ ಕೆಲಸಗಳು ಎಲ್ಲರಿಗೂ ಮಾದರಿ ಆಗುವಂಥದ್ದು. ಪುನೀತ್ ಮೇಲಿನ ತಮ್ಮ ಅಭಿಮಾನವನ್ನು ಜನರು ವಿವಿಧ ರೀತಿಯಲ್ಲಿ ತೋರಿಸುತ್ತಿದ್ದಾರೆ.
ಅನೇಕ ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಅಪ್ಪು ಫೋಟೋ ರಾರಾಜಿಸುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ನಡೆದ ವೀರಭದ್ರೇಶ್ವರ ಜಾತ್ರೆಯಲ್ಲಿ ಅಭಿಮಾನಿಯೊಬ್ಬರು ಅಪ್ಪು ಫೋಟೋ ಹಿಡಿದು ಕೆಂಡ ಹಾಯ್ದಿದ್ದಾರೆ.
ಈ ವಿಡಿಯೋ ವೈರಲ್ ಆಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಈ ರೀತಿ ಘಟನೆಗಳು ಮತ್ತೆ ಮತ್ತೆ ವರದಿ ಆಗುತ್ತಲೇ ಇವೆ. ಅದನ್ನು ಕಂಡಾಗ ಪುನೀತ್ ರಾಜ್ ಕುಮಾರ್ ಮೇಲೆ ಜನರು ಇಟ್ಟಿರುವ ಅಭಿಮಾನ ಶಾಶ್ವತ ಎಂಬುದು ಸಾಬೀತಾಗುತ್ತದೆ.
ಇದನ್ನು ಓದಿ :- ಯುವಕರ ಜೊತೆ ಗೋಲಿ ಆಟವಾಡಿದ ಎಂ.ಪಿ ರೇಣುಕಾಚಾರ್ಯ