ಭಾರತ-ಚೀನಾ ಗಡಿಯಲ್ಲಿ ಸೈನಿಕರ ಸಂಘರ್ಷ – ಮಧ್ಯಾಹ್ನ ಸಂಸತ್ತಿನ ಉಭಯ ಸದನಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಷಣ

ಸಂಸತ್ ಕಲಾಪದಲ್ಲಿ ಈಗ ಭಾರತ-ಚೀನಾ ( INDIA-CHINA ) ಸಂಘರ್ಷದ ಬಗ್ಗೆ ಗದ್ದಲ ಶುರುವಾಗಿದೆ.

ಸಂಸತ್ ಕಲಾಪದಲ್ಲಿ ಈಗ ಭಾರತ-ಚೀನಾ ( INDIA-CHINA ) ಸಂಘರ್ಷದ ಬಗ್ಗೆ ಗದ್ದಲ ಶುರುವಾಗಿದೆ. ಅರುಣಾಚಲ ಪ್ರದೇಶದ ಗಡಿ ವಾಸ್ತವ ರೇಖೆಯ ಉದ್ದಕ್ಕೂ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಹತ್ತಿಕ್ಕಲು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Narendra Modi (@narendramodi) / Twitter

ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ( RAJNATH SINGH ) ಇಂದು ಮಧ್ಯಾಹ್ನ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ. ಪ್ರತಿಪಕ್ಷ ನಾಯಕರು ಹಾಗೂ ಪ್ರಧಾನ ಮಂತ್ರಿಮೋದಿ ಉತ್ತರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಭಾರತ-ಚೀನಾ ಗಡಿಭಾಗದ ಪೂರ್ವ ಲಡಾಖ್ ನಲ್ಲಿ ಎರಡು ಕಡೆಯ 30 ತಿಂಗಳ ಗಡಿ ಬಿಕ್ಕಟ್ಟಿನ ನಂತರ ಕಳೆದ ಶುಕ್ರವಾರ ಸೂಕ್ಷ್ಮ ವಲಯದ ಗಡಿ ವಾಸ್ತವ ರೇಖೆ ಉದ್ದಕ್ಕೂ ಯಾಂಗ್ಟ್ಸೆ ಬಳಿ ಘರ್ಷಣೆ ಸಂಭವಿಸಿದೆ. ಘರ್ಷಣೆಯಲ್ಲಿ ಭಾರತದ 6 ಮಂದಿ ಸೈನಿಕರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಸುದ್ದಿ ಬಂದ ಬೆನ್ನಲ್ಲೇ ಕಾಂಗ್ರೆಸ್ ನಿನ್ನೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ಈ ವಿಷಯವನ್ನು ಚರ್ಚಿಸುವ ಮೂಲಕ ಸರ್ಕಾರವು ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದೆ. ತೃಣಮೂಲ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಈ ಕುರಿತು ಚರ್ಚೆ ನಡೆಸುವಂತೆ ನೋಟಿಸ್ ಜಾರಿ ಮಾಡಿದೆ.  ಇದನ್ನು ಓದಿ : –  ಕಾಂಗ್ರೆಸ್ ನವರು SC-ST ಮತ ಕಬಳಿಸಲು ಜನರ ದಿಕ್ಕು ತಪ್ಪಿಸುತ್ತಿದ್ದಾರೆ – ಸಿಎಂ ಬೊಮ್ಮಾಯಿ

Rajnath Singh | Boeing : Rajnath Singh meets executives of US aerospace  giants Boeing and Raytheon
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಮಧ್ಯಾಹ್ನ ಲೋಕಸಭೆ ಮತ್ತು 2 ಗಂಟೆಗೆ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಗೂ ಮುನ್ನ ಅವರು ಸೇನೆ ಮತ್ತು ರಾಜತಾಂತ್ರಿಕ ನಾಯಕತ್ವದೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಲಿದ್ದಾರೆ. ಸಂಸತ್ತಿನಲ್ಲಿ ಕೇಂದ್ರದ ಪ್ರತಿಕ್ರಿಯೆಯನ್ನು ರೂಪಿಸಲು ರಕ್ಷಣಾ ಸಚಿವರು ಪ್ರಧಾನಿ ಮತ್ತು ಸಂಪುಟ ಸಹೋದ್ಯೋಗಿಗಳನ್ನು ಭೇಟಿಯಾಗಲಿದ್ದಾರೆ. ಕಾಂಗ್ರೆಸ್ ( CONGRESS ) ಸಂಸದರಾದ ಮನೀಶ್ ತಿವಾರಿ ಮತ್ತು ಸೈಯದ್ ನಾಸಿರ್ ಹುಸೇನ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗಡಿ ಘರ್ಷಣೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದಾರೆ. ಎಎಪಿ ಸಂಸದ ರಾಘವ್ ಚಡ್ಡಾ ಮತ್ತು RJDಯ ಮನೋಜ್ ಝಾ ಕೂಡ ರಾಜ್ಯಸಭೆಯಲ್ಲಿ ಗಡಿ ಘರ್ಷಣೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದಾರೆ.

ಇದನ್ನು ಓದಿ : –  ಕರ್ನಾಟಕ, ಮಹಾರಾಷ್ಟ್ರ ಸಿಎಂಗಳ ಸಭೆ ಕರೆದ ಅಮಿತ್ ಶಾ – ನಾಳೆ ದೆಹಲಿಯಲ್ಲಿ ನಡೆಯಲಿದೆ ಮಹತ್ವದ ಸಭೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!