ಚಾಮರಾಜಪೇಟೆ ಈದ್ಗಾ ಮೈದಾನ (Chamrajpet Idgah Maidan) ದಲ್ಲಿ ಆಟವಾಡಲು ಮಕ್ಕಳಿಗೆ ಅವಕಾಶ ಕೊಡುವುದಿಲ್ಲ ಎಂದು ಯಾರೂ ಹೇಳಿಲ್ಲ. ನನ್ನ ಪ್ರಾಣ ಹೋಗುವವರೆಗೂ ಮೈದಾನ ತೆಗೆಯಲು ಸಾಧ್ಯವಿಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ (Zameer Ahmed) ಹೇಳಿದ್ದಾರೆ.
ಚಾಮರಾಜಪೇಟೆಯ ವೆಂಕಟಾರಾಮ್ ಕಲಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಆಟದ ಮೈದಾನ ಉಳಿಸಬೇಕು ಎಂದು ಸಭೆ ಮಾಡಿ ಒತ್ತಾಯಿಸಿದರು. ಆಟದ ಮೈದಾನ ಎಲ್ಲಿಗೆ ಹೋಗಿದೆ” ಆಟದ ಮೈದಾನವನ್ನು ಯಾರು ತೆಗೆದಿದ್ದಾರೆ? ಎಂಎಲ್ಎ, ಬಿಬಿಎಂಪಿ, ವಕ್ಸ್ ಬೋರ್ಡ್ ಯಾರಾದ್ರೂ ಇಲ್ಲಿ ಆಟದ ಮೈದಾನ ಇರುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ : – ಈದ್ಗಾ ಮೈದಾನದಲ್ಲಿ ವಿಶ್ವ ಯೋಗ ದಿನಾಚರಣೆ – ಸದ್ಯದ ಪರಿಸ್ಥಿತಿಯಲ್ಲಿ ಅನುಮತಿ ನೀಡೋದಕ್ಕೆ ಅಗಲ್ಲ ಎಂದ BBMP
ಚಾಮರಾಜಪೇಟೆಯಲ್ಲಿ ಆಟ ಆಡಲು ಜಾಗ ಸಿಗುತ್ತಿಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಆಟ ಆಡೋಕೆ ಜಾಗ ಕೊಡಲ್ಲ ಅಂತ ಯಾರಾದರೂ ಹೇಳಿದ್ದಾರಾ ಎಂದು ಕೇಳಿದ್ರು. ನನ್ನ ಪ್ರಾಣ ಇರುವವರೆಗೂ ಈ ಮೈದಾನ ತೆಗೆಯಲು ಸಾಧ್ಯವೇ ಇಲ್ಲ. ಇದು ಆಟದ ಮೈದಾನವಾಗಿಯೇ ಉಳಿಯುತ್ತದೆ. 1871ರಿಂದಲೂ ಇದನ್ನು ಈದ್ಗಾ ಮೈದಾನವಾಗಿ ಗುರುತಿಸಲಾಗಿದೆ ಎಂದು ಹೇಳಿದ್ರು.
ಜಮೀರ್ ಅಹಮದ್ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಮಾಜಿ ಕಾರ್ಪೊರೇಟರ್ ಗಳಾದ ಕೋಕಿಲಾ ಚಂದ್ರಶೇಖರ್, ಸುಜಾತ ಡಿ.ಸಿ.ರಮೇಶ್, ಬಿ.ಟಿ.ಶ್ರೀನಿವಾಸಮೂರ್ತಿ, ಚಂದ್ರಶೇಖರ್, ಅಲ್ತಾಫ್ ಖಾನ್ ಸೇರಿದಂತೆ ಹಲವು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ್ ಮಾತನಾಡಿ, ನನ್ನ ಗೆಲುವಿಗೆ ಕ್ಷೇತ್ರದ ಎಲ್ಲ ವರ್ಗದ ಸಹಕರಿಸಿದ್ದಾರೆ. ಕೇವಲ ಒಂದೇ ಧರ್ಮದ ಪರ ನಾನು ನಿಲ್ಲಲು ಆಗುವುದಿಲ್ಲ, ಈ ಮೈದಾನವನ್ನು ಆಟದ ಮೈದಾನವಾಗಿ ಉಳಿಸುವುದಾಗಿ ಜಮೀರ್ ಮಾತು ಕೊಟ್ಟಿದ್ದಾರೆ ಎಂದು ಹೇಳಿದ್ರು.
ಇದನ್ನೂ ಓದಿ : – ಈದ್ಗಾ ಮೈದಾನ ಬಿಬಿಎಂಪಿಯ ಆಸ್ತಿ – ಕೊನೆಗೂ ಸಿಕ್ತು ದಾಖಲೆ