ಇಂದು ಪುನೀತ್ ರಾಜ್ ಕುಮಾರ್ 47ನೇ ಹುಟ್ಟುಹಬ್ಬದ ಹಿನ್ನೆಲೆ ಅಪ್ಪು ಸಮಾಧಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಇದೇ ವೇಳೆ ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿಯ ದರ್ಶನವನ್ನು ಸಹ ಪಡೆದರು. ಅಪ್ಪು ಜನುಮ ದಿನದ ಪ್ರಯುಕ್ತ ಇಂದು ಪುನೀತ್ ಅಭಿನಯದ ಬಹುನಿರೀಕ್ಷಿತ ಜೇಮ್ಸ್ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಸಿನಿಮಾ ನೋಡಲು ಮುಂಜಾನೆಯಿಂದಲೇ ಚಿತ್ರಮಂದಿರದತ್ತ ಜನ ಸಾಗರವೇ ಹರಿದುಬರುತ್ತಿದೆ. ಒಟ್ಟಾರೆ ಅಪ್ಪು ಹುಟ್ಟುಹಬ್ಬವನ್ನು ಕರುನಾಡಿನ ಜನತೆ ಹಬ್ಬದಂತೆ ಆಚರಿಸುತ್ತಿದ್ದಾರೆ. ಇದೇ ವೇಳೆ ಅಪ್ಪು ಸಮಾಧಿಯತ್ತ ಬೆಳಗ್ಗೆ 5 ಗಂಟೆಯಿಂದಲೇ ಜನ ಸಾಗರವೇ ಹರಿದು ಬರ್ತಿದೆ. ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದ್ದು. ನಾಲ್ಕು ಕೆ.ಎಸ್.ಆರ್.ಪಿ ತುಕಡಿ ಜೊತೆ 200 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.