ಅಸ್ಸಾಂನಲ್ಲಿ ಲಕ್ಷಾಂತರ ಜನರ ಜೀವನವನ್ನು ನರಕವನ್ನಾಗಿಸಿದ ಪ್ರವಾಹ ಮಾನವ ನಿರ್ಮಿತ . ಇದೊಂದು ಜಿಹಾದಿ (ZIHADI) ಕೃತ್ಯ ಇರಬಹುದು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಇದು ಪ್ರಾಕೃತಿಕ ವಿಕೋಪ (NATURAL CALAMITY) ಅಲ್ಲವೇ ಅಲ್ಲ ಎಂದು ತನಿಖೆಗಳಿಂದ ಮೇಲ್ನೋಟಕ್ಕೆ ಸಾಬೀತಾಗಿದೆ.
ಮಿಥು ಹುಸೇನ್ ಲಷ್ಕರ್ ಹಾಗೂ ಕಾಬೂಲ್ ಖಾನ್ ಎಂಬ ಇಬ್ಬರು ದುಷ್ಕರ್ಮಿಗಳಿಂದ ಅಸ್ಸಾಂನ ಕಚ್ಚಾರ್ ಹಾಗೂ ಸಿಲ್ಚಾರ್ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ ಎನ್ನಲಾಗಿದೆ. ಈ ಇಬ್ಬರೂ ಆರೋಪಿಗಳು ಇನ್ನಿತರ ಸಹಚರರ ಜೊತೆಗೂಡಿ ಬರಾಕ್ ನದಿಯ ತಡೆಗೋಡೆಯನ್ನು ಧ್ವಂಸಗೊಳಿಸಿದ ಕಾರಣ ಪ್ರವಾಹ ಉಂಟಾಗಿದೆ ಎಂದು ತಿಳಿದು ಬಂದಿದೆ.ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್(HIMANTH BISHWAS) ಈ ವಿಚಾರವನ್ನು ದೃಢಪಡಿಸಿದ್ದು, ಪ್ರವಾಹವು ಪ್ರಾಕೃತಿಕ ವಿಕೋಪವಲ್ಲ, ಇದು ಮಾನವ ನಿರ್ಮಿತ ಅನ್ನೋದನ್ನು ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ : – ಮುಸ್ಲಿಂ ಸಮುದಾಯಕ್ಕೆ ಉಪರಾಷ್ಟ್ರಪತಿ ಪಟ್ಟ? ರೇಸ್ ನಲ್ಲಿ ನಖ್ವಿ, ಆರಿಫ್ ಮೊಹಮ್ಮದ್ ಖಾನ್, ನಜ್ಮಾ ಹೆಪ್ತುಲ್ಲಾ !
ಬರಾಕ್ ನದಿ ಹರಿಯುವ ಕಚ್ಚಾರ್ ಜಿಲ್ಲೆಯಲ್ಲಿ ತಡೆಗೋಡೆ ಇರುವ ಪ್ರದೇಶಕ್ಕೆ ತನ್ನ ಸಂಗಡಿಗರ ಜೊತೆ ಬಂದಿದ್ದ ಆರೋಪಿ ಖಾನ್, ನದಿ ಏರಿಯನ್ನು ಧ್ವಂಸಗೊಳಿಸುವ ಚಿತ್ರೀಕರಣ ಕೂಡಾ ಮಾಡಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿಎಂ ಭೇಟಿ ನೀಡಿದಾಗ ಸ್ಥಳೀಯರು ಧ್ವಂಸವಾದ ಏರಿ ಹಾಗೂ ಈ ದೃಶ್ಯಾವಳಿಯನ್ನು ಸಿಎಂಗೆ ತೋರಿಸಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಸಿಐಡಿಗೆ ಸರ್ಕಾರ ಸೂಚಿಸಿದೆ. ಸಿಲ್ಚಾರ್ ಜಿಲ್ಲೆ( SOLWAR DISTRICT)ಯಲ್ಲಿ ಹಿಂದೂಗಳೇ ಬಹುಸಂಖ್ಯಾತರು. ಹೀಗಾಗಿ, ಈ ಕೃತ್ಯವು ಹಿಂದೂಗಳಿಗೆ ಅಪಾಯ ತಂದೊಡ್ಡಲು ಮಾಡಿದ ಸಂಚೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಸಿಲ್ಚಾರ್ ಜಿಲ್ಲೆಯಲ್ಲಿ ಶೇ. 86ಕ್ಕೂ ಹೆಚ್ಚು ಹಿಂದೂ ಜನಸಂಖ್ಯೆ ಇದೆ. ಇದೀಗ ಸೃಷ್ಟಿಯಾಗಿರುವ ಪ್ರವಾಹವು ಭೂ ಜಿಹಾದ್ನ ಭಾಗ ಇರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಇದನ್ನೂ ಓದಿ : – ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್