ಅಸ್ಸಾಂ (Assam) ಮತ್ತು ಮೇಘಾಲಯ (Meghalaya) ರಾಜ್ಯಗಳ ನಡುವೆ 50 ವರ್ಷಗಳಿಂದ ಬಾಕಿ ಇದ್ದ ಗಡಿ ವಿವಾದ ತಾರ್ಕಿಕ ಅಂತ್ಯ ಕಂಡಿದೆ.
ವಿವಾದ ಬಗೆಹರಿಸಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanth Biswas Sharma) ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ (Conrad Kongkal Sangma) ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, (AMITH SHA) ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹ ಸಚಿವಾಲಯದ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
5 ದಶಕಗಳ ಕಾಲದ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.ಅಸ್ಸಾಂ ಮತ್ತು ಮೇಘಾಲಯ 885-ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಅಪ್ಪರ್ ತಾರಾಬರಿ, ಗಜಾಂಗ್ ಮೀಸಲು ಅರಣ್ಯ, ಹಾಹಿಂ, ಲಾಂಗ್ಪಿಹ್, ಬೋರ್ಡುವಾರ್, ಬೊಕ್ಲಾಪಾರಾ, ನೋಂಗ್ವಾ, ಮಾಟಮುರ್, ಖಾನಪಾರಾ-ಪಿಲಂಕಾಟಾ, ದೇಶ್ಡೆಮೊರಿಯಾ ಬ್ಲಾಕ್ I ಮತ್ತು ಬ್ಲಾಕ್ II, ಖಂಡುಲಿ ಮತ್ತು ರೆಟಾಚೆರಾ ಅಸ್ಸಾಂ-ಮೇಘಾಲಯ ಗಡಿ ವಿವಾದಿತ ಪ್ರದೇಶಗಳಾಗಿವೆ.
1972 ರಲ್ಲಿ ಅಸ್ಸಾಂನಿಂದ ಮೇಘಾಲಯವನ್ನು ಬೇರ್ಪಡಿಸಿದಾಗ ದೀರ್ಘಕಾಲದ ಭೂ ವಿವಾದವು ಹುಟ್ಟಿಕೊಂಡಿತು. ಹೊಸ ರಾಜ್ಯ ರಚನೆಯ ಆರಂಭಿಕ ಒಪ್ಪಂದದಲ್ಲಿ ಗಡಿಗಳ ಗಡಿರೇಖೆಯ ಭಿನ್ನಾಭಿಪ್ರಾಯದ ಪರಿಣಾಮವಾಗಿ ಗಡಿ ಸಮಸ್ಯೆಗಳು ಉದ್ಭವಿಸಿದವು.
ಇದನ್ನುಓದಿ :- ನೂತನ ಉಪಲೋಕಯುಕ್ತರಾಗಿ ನ್ಯಾಯಮೂರ್ತಿ ಕೆ.ಎನ್ ಫಣಿಂದ್ರ ಅಧಿಕಾರ ಸ್ವೀಕಾರ