ಕ್ರಿಕೆಟ್ ಆಟಗಾರ ಕೆ. ಎಲ್ ರಾಹುಲ್ (KL.Rahul) ಮತ್ತು ನಟಿ ಆಥಿಯಾ ಶೆಟ್ಟಿ (Athiya sheety) ವಿವಾಹವನ್ನು ಹಿರಿಯ ನಟ ಮತ್ತು ಆಥಿಯಾ ಶೆಟ್ಟಿ ಅವರ ತಂದೆ ಸುನೀಲ್ ಶೆಟ್ಟಿ (Sunil sheety) ಖಚಿತಪಡಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ತಮ್ಮ ಪುತ್ರಿ ಆಥಿಯಾ ಶೆಟ್ಟಿ ಮತ್ತು ಗೆಳೆಯ ರಾಹುಲ್ ಮದುವೆಯ ಬಗ್ಗೆ ಇತ್ತೀಚಿನ ಸಮಾರಂಭವೊಂದರಲ್ಲಿ ಮಾತನಾಡಿದ್ದಾರೆ.
ಬಹುದಿನಗಳಿಂದ ಕೇಳಿಬರುತ್ತಿದ್ದ ಆಥಿಯಾ ಹಾಗೂ ಕೆ.ಎಲ್ ರಾಹುಲ್ ಮದುವೆಯ ಊಹಾಪೋಹಗಳಿಗೆ ತೆರೆ ಎಳೆದು, ವಿವಾಹ ನಡೆಯುವುದು ಖಚಿತ ಎಂದು ತಿಳಿಸಿದ್ದಾರೆ. ಮಾಧ್ಯಮದವರು ಆಥಿಯಾ ಮತ್ತು ರಾಹುಲ್ ಮದುವೆ ಬಗ್ಗೆ ಪ್ರಶ್ನೆ ಎತ್ತಿದ್ದು, ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ನಟ ಸುನೀಲ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : – RRR ಚಿತ್ರದ ಸಕ್ಸಸ್ ನಂತರ ಸ್ಯಾಂಡಲ್ ವುಡ್ ಗೆ ಜೂನಿಯರ್ NTR ಎಂಟ್ರಿ…!