ಬೆಂಗಳೂರಿ (Bengaluru) ನಲ್ಲಿ ನಿಷೇಧಿತ ಈ-ಸಿಗರೇಟ್ (E-cigarette) ಮಾರಾಟ ಮಾಡ್ತಿದ್ದ ಅಡ್ಡೆಗಳ ಮೇಲೆ ತಡರಾತ್ರಿ ದಾಳಿ ನಡೆಸಿ ಅಂದಾಜು 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಈ-ಸಿಗರೇಟ್ ಗಳನ್ನು ಜಪ್ತಿ ಮಾಡಲಾಗಿದೆ. ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದಿಂದ ದಾಳಿ ನಡೆದಿದೆ.
ಕೋರಮಂಗಲ (Koramangala) , ಬಾಣಸವಾಡಿ (Banaswadi) , ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿನ ಅಂಗಡಿಗಳ ಮೇಲೆ ದಾಳಿ ನಡೆದಿದೆ. 2019ರಲ್ಲಿ ಈ-ಸಿಗರೇಟ್ ಬ್ಯಾನ್ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಕೇಂದ್ರ ಸರ್ಕಾರದಿಂದ ಬ್ಯಾನ್ ಗೊಳಿಸಿ ಆದೇಶ ಹೊರಡಿಸಿತ್ತು . ಆದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ಈ-ಸಿಗರೇಟ್ ನನ್ನು ಮಾರಾಟ ಮಾಡಲಾಗ್ತಿದೆ. ಕೇರಳ ಮೂಲದ ಆರೋಪಿಗಳು, ವಿದೇಶದಿಂದ ಅಮದು ಮಾಡಿಕೊಂಡು ನಗರದಲ್ಲಿ ಮಾರಾಟ ಮಾಡ್ತಿದ್ದರು . ಇತ್ತೀಚೆಗೆ ಹೆಚ್ಚಾಗಿ ಯುವ ಪೀಳಿಗೆಯವರು ಈ-ಸಿಗರೇಟ್ ಗೆ ಮೊರೆ ಹೋಗುತ್ತಿದ್ದಾರೆ. ಒಂದು ಈ-ಸಿಗರೇಟ್ ಬೆಲೆ 5 ಸಾವಿರದವರೆಗೆ ಇರಬಹುದು . ಇದನ್ನೂ ಓದಿ : – ಟೊಯೋಟ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ನಿಧನ – ಸಂತಾಪ ಸೂಚಿಸಿದ ಸಿಎಂ
ಇಂತಹ ಈ-ಸಿಗರೇಟ್ ಮಾರಾಟದ ಬಗ್ಗೆ ಸಿಸಿಬಿ ಪಕ್ಕಾ ಮಾಹಿತಿ ಪಡೆದಿದೆ. ಕೇರಳ ಮೂಲದ ಕೆಲವರನ್ನ ವಶಕ್ಕೆ ಪಡೆದು 50ಲಕ್ಷಕ್ಕೂ ಹೆಚ್ಚು ಮೌಲ್ಯದ ಈ-ಸಿಗರೇಟ್ ಜಪ್ತಿ ಮಾಡಲಾಗಿದೆ. ಪುಲಕೇಶಿ ನಗರ, ಬಾಣಸವಾಡಿ, ಕೋರಮಂಗಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : – ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ …!