ಬೆಲ್ಜಿಯಂ ಕನ್ಯೆ (Belgium ) ಕೆಮಿಲ್ (Kemil) ಎಂಬುವರನ್ನು ಹಂಪಿ (Hampi) ಯುವಕ ಅನಂತರಾಜು ಮದುವೆಯಾಗಿದ್ದಾರೆ. ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿ (Virupaksha temple) ಯಲ್ಲಿ ಅದ್ದೂರಿ ವಿವಾಹ ನಡೆದಿದೆ. ಭಾರತೀಯ ಸಂಪ್ರದಾಯದಂತೆ ವಿದೇಶಿ ಕನ್ಯೆ ಕೆಮಿಲ್ ಸಪ್ತಪದಿ ತುಳಿದಿದ್ದಾರೆ. ಬೆಳಗಿನ 9.25 ರ ಕುಂಭ ಲಗ್ನದ ಶುಭಮುಹೂರ್ತದಲ್ಲಿ ವಿವಾಹವಾಗಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅನಂತರಾಜುನನ್ನು ವಿದೇಶಿ ಕನ್ಯೆ ಕೆಮಿಲ್ ಕೈ ಹಿಡಿದಿದ್ದಾರೆ.
ನಾಲ್ಕೈದು ವರ್ಷದಿಂದ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಆಟೋ ಚಾಲಕನಾಗಿ ಅನಂತರಾಜು (Ananthraju) ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ವರ್ಕರ್ ಆಗಿ ಬೆಲ್ಜಿಯಂ ಕನ್ಯೆ ಕೆಮಿಲ್ ಕೆಲಸ ಮಾಡುತ್ತಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಕೆಮಿಲ್ ಕುಟುಂಬ ಹಂಪಿ ವೀಕ್ಷಣೆಗೆ ಬಂದಿದ್ದರು. ಅನಂತರಾಜು ಪ್ರಾಮಾಣಿಕತೆಗೆ ಕೆಮಿಲ್ ಕುಟುಂಬಸ್ಥರು ಮನಸೋತಿದ್ದರು. ಕೆಮಿಲ್ ಜೀಪ್ ಫಿಲಿಪ್ಪೆ ದಂಪತಿಯ ತೃತೀಯ ಪುತ್ರಿ ಆಗಿದ್ದಾರೆ. ಮೂರು ವರ್ಷದ ಹಿಂದೆಯೇ ಈ ಜೋಡಿ ಪ್ರೇಮ ವಿವಾಹ ಆಗಬೇಕಿತ್ತು. ಕೊರೊನಾ ಮಹಾಮಾರಿ ಇವರ ಪ್ರೇಮ ವಿವಾಹಕ್ಕೆ ಅಡ್ಡಿ ಆಗಿತ್ತು. ಮಗಳ ಮದುವೆಯನ್ನು ಬೆಲ್ಜಿಯಂನಲ್ಲೇ ಅದ್ದೂರಿಯಾಗಿ ಮಾಡಬೇಕು ಎಂದು ಕೆಮಿಲ್ ಕುಟುಂಬ ಅಂದುಕೊಂಡಿದ್ದರು .ಆದ್ರೆ ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ಮದುವೆಗೆ ಜೀಪ್ ಫಿಲಿಪ್ಪೆ ನಿರ್ಧರಿಸಿದ್ದರು.
ಇದನ್ನೂ ಓದಿ : – ದೇಶದ ಕೆಲವೆಡೆ ದಡಾರ ಪತ್ತೆ – ರಾಂಚಿ , ಅಹಮದಾಬಾದ್ ಗೆ ಕೇಂದ್ರ ತಂಡ