ಚಾಮರಾಜನಗರ: ಇನ್ನುಮುಂದೆ ಬಂಡೀಪುರ ಉದ್ಯಾನದಲ್ಲಿ ಸಫಾರಿಗೆ ತೆರಳುವ ಮುನ್ನ ಪ್ರವಾಸಿಗರು ತಮ್ಮ ಜೇಬು ಭದ್ರಮಾಡಿಕೊಳ್ಳಿ. ಬಂಡೀಪುರ ಉದ್ಯಾನದ ಸಫಾರಿ ದರವನ್ನು ಏರಿಕೆ ಮಾಡಲಾಗಿದೆ. 250 ರೂ. ಇದ್ದ ಸಫಾರಿ ದರವನ್ನು ಧಿಡೀರನೆ 300ರೂ.ಗೆ ಏರಿಕೆ ಮಾಡಲಾಗಿದೆ.
ಅಲ್ಲದೇ 350 ರೂ.ನಿಂದ 600ರೂ.ಗೆ ವನ್ಯ ಸಂಪತ್ತು ನೋಡುವ ಸಫಾರಿ ಬೆಲೆಯನ್ನು ಹೆಚ್ಚಿಸಲಾಗಿದೆ. ವಿದೇಶಿ ಪ್ರವಾಸಿಗರಿಗೆ ಈ ಮುನ್ನ ರೂ.500 ಸಫಾರಿ ದರವಿತ್ತು. ಈ ಶುಲ್ಕವನ್ನು 100ರೂ.ಗೆ ಏರಿಸಲಾಗಿದೆ. ಇದಲ್ಲದೇ 3 ಸಾವಿರ ಇದ್ದಂತ ಸಫಾರಿ ಜಿಪ್ಸಿ ಬಾಡಿಗೆ ದರವನ್ನು ರೂ.3500ಕ್ಕೆ, 9 ಸೀಟಿನ ಕ್ಯಾಂಪರ್ 5 ಸಾವಿರದಿಂದ 7 ಸಾವಿರಕ್ಕೆ ಏರಿಕೆ ಮಾಡಿದೆ.
ವಿದೇಶಿಗರಿಗೆ ಜಿಪ್ಸಿ ಬಾಡಿಗೆಯನ್ನು 5 ಸಾವಿರ ಹಾಗೂ ಕ್ಯಾಂಪರ್ ಗೆ 7 ಸಾವಿರ ರೂಗೆ ಏರಿಕೆ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಹೀಗೆ ಧಿಡೀರನೇ ಬೆಲೆ ಏರಿಕೆ ಮಾಡಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.