ಬೆಂಗಳೂರಿನಲ್ಲಿ ಕಳೆದ 15 ದಿನಗಳ ಹಿಂದೆ ಸರ್ಕಾರ ವಾರ್ಡ್ ವಾರು ಮೀಸಲಾತಿಯ ಕರಡು ಪಟ್ಟಿಯನ್ನು ಪ್ರಕಟಿಸಿತ್ತು. 10 ದಿನಗಳ ಕಾಲ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು .ಈ ಮಧ್ಯೆ ಹೈ ಕೋರ್ಟ್ (High court) ಆಗಸ್ಟ್ 16 ರವರೆಗೆ ಅಂತಿಮ ಪಟ್ಟಿ ಪ್ರಕಟಿಸದಂತೆ ಸೂಚಿಸಿತ್ತು.
2000ಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಕೆಯಾಗಿತ್ತು . ಸಾರ್ವಜನಿಕ ಆಕ್ಷೇಪಣೆ ಪರಿಶೀಲನೆ ನಂತರ ಸರ್ಕಾರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. 2011ರ ಜನಗಣತಿಯಂತೆ ಮೀಸಲಾತಿ ಅಂತಿಮಗೊಳಿಸಿ ಅಧಿಸೂಚನೆ ನೀಡಲಾಗಿದೆ. ಆಕ್ಷೇಪಣೆಗಳ ಪರಿಶೀಲನೆಗಾಗಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಪರಿಶೀಲನಾ ಸಮಿತಿಯನ್ನು ಸರ್ಕಾರ ರಚಿಸಿದೆ. ಪರಿಶೀಲನಾ ಸಮಿತಿಯಿಂದ 243 ವಾರ್ಡ್ ಗಳ ಮೀಸಲಾತಿ ಆಕ್ಷೇಪಣೆಗಳ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗಿದೆ. ಬಳಿಕ ಸರ್ಕಾರದ ಅನುಮೋದನೆಗಾಗಿ ಸಮಿತಿ ಶಿಫಾರಸು ನೀಡಿದೆ. ಸಮಿತಿಯ ಶಿಫಾರಸ್ಸುಗಳನ್ನ ಒಪ್ಪಿ ಸರ್ಕಾರ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದೆ. ಇದನ್ನೂ ಓದಿ : – ಸಹಜ ಸ್ಥಿತಿಯತ್ತ ಶಿವಮೊಗ್ಗ- ಇಂದಿನಿಂದ ಶಾಲಾ-ಕಾಲೇಜು ಓಪನ್
243 ವಾರ್ಡ್ ಗಳಿಗೆ ಮೀಸಲಾತಿ ಅಂತಿಮವಾಗಿದೆ. ಮೇಲ್ನೋಟಕ್ಕೆ ಮೀಸಲಾತಿ ನಿಗದಿಯಲ್ಲಿ ಅಂತಹ ದೊಡ್ಡ ಬದಲಾವಣೆ ಕಾಣುತ್ತಿಲ್ಲ . 2000 ಆಕ್ಷೇಪಣೆಗಳ ಮನವಿಗಳನ್ನು ಪುರಸ್ಕರಿಸಿ ಹೆಚ್ಚಿನ ಬದಲಾವಣೆಗಳನ್ನು ಮಾಡಿದಂತೆ ತೋರುತ್ತಿಲ್ಲ. ಕಾಂಗ್ರೆಸ್ ಜೆಡಿಎಸ್ ಕ್ಷೇತ್ರಗಳಲ್ಲಿ ಈ ಹಿಂದಿನಂತೆಯೆ ಮಹಿಳೆಯರಿಗೆ ಹೆಚ್ಚು ಮೀಸಲಾತಿ ನೀಡಲಾಗಿದೆ . ಹೆಚ್ಚಿನ ಸಾಮಾನ್ಯ ಮೀಸಲಾತಿಗಳು ಬಿಜೆಪಿ ಪ್ರಭಾವವಿರುವ ವಾರ್ಡ್ ಗಳಲ್ಲಿ ನಿಗದಿ ಮಾಡಲಾಗಿದೆ.
ಇದನ್ನೂ ಓದಿ : – ಖಾಸಗಿ ಬಸ್ ಪಲ್ಟಿ – ಸ್ಧಳದಲ್ಲೇ ಇಬ್ಬರು ಸಾವು