ಹಿಂದೂಗಳ ಹತ್ಯೆಗೆ ಸಂಚು ರೂಪಿಸಿದವರ ಬಂಧನ ವಿಚಾರವಾಗಿ ಕಲಬುರಗಿಯಲ್ಲಿ ಶಾಸಕ ಬಸವನಗೌಡ ಯತ್ನಾಳ್ (BASAVANA GOWDA YATNAL )ಪ್ರತಿಕ್ರಿಯೆ ನೀಡಿದ್ದಾರೆ. ಸಿ.ಎಂ ಬಸವರಾಜ್ ಬೊಮ್ಮಾಯಿ (C.M. BASAVARAJ BOMMAI )ಡೈಲಾಗ್ ಹೊಡೆಯೊದನ್ನ ಬಿಟ್ಟು ಗೋಲಿ ಹೊಡೆಯೋದನ್ನ ಶುರು ಮಾಡಬೇಕು.
ಆಂತರಿಕ ಭಯೋತ್ಪಾದನೆ ಮಟ್ಟ ಹಾಕುವ ಕೆಲಸ ಆಗಬೇಕು. ಉತ್ತರ ಪ್ರದೇಶ ಮಾದರಿಯಲ್ಲಿ ನಮ್ಮ ಸರ್ಕಾರ ನಡೆಸಬೇಕು. ಶಾಂತಿ ಕಾಪಾಡಿ ಅನ್ನೋ ಡೈಲಾಗ್ ಬಿಟ್ಟು ಬಿಡಬೇಕು ಎಂದು ಹೇಳಿದ್ದಾರೆ. ಆಜಾನ್ ವರ್ಸಸ್ ಸುಪ್ರಭಾತ ವಿಚಾರ ಕುರಿತಂತೆ ಸುಪ್ರೀಂಕೋರ್ಟ್ ಆದೇಶವನ್ನ ಎಲ್ಲರು ಪಾಲನೆ ಮಾಡಬೇಕು. ದ್ವನಿವರ್ಧಕಗಳು ಕರ್ಕಶವಾಗಿ ಬರದೇ ಇರೋ ಹಾಗೆ ಬಳಕೆ ಮಾಡಬೇಕು. ಸರ್ಕಾರವು ಕೂಡ ಸುಪ್ರಿಂ ಕೋರ್ಟ ನೀಡಿರುವ ಆದೇಶವನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ – ಸಚಿವ ಬಿಸಿ ಪಾಟೀಲ್ ಸ್ಪಷ್ಟನೆ