ಇಂದು ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಬಿಎಂಪಿ ಜಿಲ್ಲಾಧ್ಯಕ್ಷರು, ಶಾಸಕರುಗಳ ಜೊತೆ ಸಭೆ ನಡೆಸಿದ್ದಾರೆ ಎಂದು ಸಿಎಂ ಬೊಮ್ಮಾಯಿ (Cm bommai ) ಹೇಳಿದ್ದಾರೆ . ಬೆಂಗಳೂರಿನಲ್ಲಿ (Bengaluru)ಮಾತನಾಡಿದ ಅವರು ಬಿಬಿಎಂಪಿ ಚುನಾವಣಾ(Bbmp election) ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ.
ಈಗಿನಿಂದಲೇ ಬಿಬಿಎಂಪಿ ಚುನಾವಣೆ ತಯಾರಿ ಮಾಡಬೇಕು. ಪಕ್ಷದ ವತಿ ಇಂದಲೇ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು. ಅಭಿವೃದ್ಧಿ ಕಾಮಗಾರಿ ಈಗಿನಿಂದಲೇ ಮಾಡಬೇಕು. ಮಳೆಗಾಲ ಆರಂಭ ಆಗೋ ಮೊದಲೇ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದೆ. ವಿಷನ್ ಡಾಕ್ಯುಮೆಂಟ್ ಮಾಡಲು ನಿರ್ಧಾರ ಮಾಡಿದ್ದೇವೆ. ಪ್ರತೀ 15 ದಿನಗಳಿಗೊಮ್ಮೆ ಸಭೆ ಸೇರಲು ನಿರ್ಧಾರ ಮಾಡಲಾಗಿದೆ. ಚುನಾವಣೆ ವಿಚಾರದಲ್ಲಿ ಜನಾಭಿಪ್ರಾಯ ಪಡೆದು ವಿಷನ್ ಡಾಕ್ಯುಮೆಂಟ್ ಮಾಡಬೇಕು.ಶಾಸಕರು, ಸಚಿವರು ಈಗಾಗಲೇ ಅಭಿಪ್ರಾಯ ಸಲ್ಲಿಸಿದ್ದಾರೆ. ಇದನ್ನೂ ಓದಿ : – ರೈತರ ಖಾತೆಗೆ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನ ವರ್ಗಾವಣೆ
ಅಶೋಕ್ (Ashok), ಸೋಮಣ್ಣ (Sommanna) ಪೂರ್ವ ನಿರ್ಧಾರಿತ ಕಾರ್ಯಕ್ರಮದಲ್ಲಿ ಇದ್ದು ಹೋಗಿದ್ದಾರೆ.ಅನುಮತಿ ಪಡೆದೇ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಚುನಾವಣೆ ನಡೆಯಲಿದೆ.ಮೂಲಭೂತ ಸೌಕರ್ಯ ಎಲ್ಲವೂ ಸರಿಯಾಗಬೇಕಿದೆ. ಮಳೆಗಾಲ ಆರಂಭವಾಗಿದೆ .ಸಬ್ ಅರ್ಬನ್ ಕಾಮಗಾರಿ ಈಗಾಗಲೇ ಮುಗಿದಿದೆ. ಮೆಟ್ರೋ ಟೆಂಡರ್ ಒಂದು ವರ್ಷ ಮೊದಲೇ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆ.ಪಾರ್ಕ್ ಮತ್ತು ಲೇಕ್ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ . ಇದನ್ನೂ ಓದಿ : – ನ್ಯಾಷನಲ್ ಹೆರಾಲ್ಡ್ ಪ್ರಕರಣ – ಸೋನಿಯಾ ರಾಹುಲ್ ಗಾಂಧಿಗೆ ED ನೊಟೀಸ್