ಖಾಸಗಿ ಬ್ಯಾಂಕ್ ನಲ್ಲಿ ಹಣವನ್ನ FD ಇಟ್ಟಿದ್ದರೆ ಹುಷಾರ್

ಬೆಂಗಳೂರಿ (Bangalore) ನಲ್ಲಿ ಗ್ರಾಹಕರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದ ಖಾಸಗಿ ಬ್ಯಾಂಕಿ (Private bank) ನ ರಿಲೇಷನ್ಶಿಪ್ ಮ್ಯಾನೇಜರ್ ಪೊಲೀಸ್ ಬಲೆಗೆ ಬಿದ್ದಿದ್ದಾಳೆ.

ಬೆಂಗಳೂರಿ (Bangalore) ನಲ್ಲಿ ಗ್ರಾಹಕರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದ ಖಾಸಗಿ ಬ್ಯಾಂಕಿ (Private bank) ನ ರಿಲೇಷನ್ಶಿಪ್ ಮ್ಯಾನೇಜರ್ ಪೊಲೀಸ್ ಬಲೆಗೆ ಬಿದ್ದಿದ್ದಾಳೆ. ಎಸ್.ಆರ್.ನಗರ ಠಾಣಾ ಪೊಲೀಸರು ಖಾಸಗಿ ಬ್ಯಾಂಕ್ ರಿಲೇಷನ್ಶಿಪ್ ಮ್ಯಾನೇಜರ್ ನನ್ನು ಬಂಧಿಸಿದ್ದಾರೆ. ತಮಿಳುನಾಡಿ (Tamil nadu) ನ ಕನ್ಯಾಕುಮಾರಿ ಮೂಲದ ಸಜಿಲ ಬಂಧಿತ ಆರೋಪಿಯಾಗಿದ್ದಾಳೆ .

ಸಜಿಲ ಎಸ್.ಆರ್.ನಗರದ ಬ್ಯಾಂಕೊಂದರಲ್ಲಿ ರಿಲೇಷನ್ಶಿಪ್ ಮ್ಯಾನೇಜರ್ ಆಗಿದ್ದಳು. ದೊಡ್ಡ ಪ್ರಮಾಣದ ಎಫ್.ಡಿ ಇಟ್ಟವರ ಹಣ ತೆಗೆದು ಎಲ್ ಐಸಿ ಬಾಂಡ್ ಖರೀದಿಸುತ್ತಿದ್ದಳು. ಬಾಂಡ್ ಮೆಚ್ಯೂರ್ ಬಳಿಕ ಗ್ರಾಹಕರ ಹಣ ಅವರ ಖಾತೆಗೆ ಡೆಪಾಸಿಟ್ (Deposit)  ಮಾಡುತ್ತಿದ್ದಳು. ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಕಳ್ಳಾಟ ಪತ್ತೆಯಾಗಿದೆ. ಎಸ್.ಆರ್.ನಗರ ಠಾಣೆಗೆ ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆರೋಪಿಯ ಅವ್ಯವಹಾರ ಬಯಲಾಗಿದೆ. 4.92 ಕೋಟಿ ಅಕ್ರಮವಾಗಿ ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ಸರಿಸುಮಾರು 250 ಎಲ್ ಐಸಿ ಬಾಂಡ್ ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನು ಓದಿ :- ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಿದ್ದೀವಿ ಅಂತಾ ಫೋಸ್ ಕೊಡುತ್ತಿದ್ದಾರೆ – ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!