ಚಿಕ್ಕಮಗಳೂರು – ಇಂದಿನಿಂದ ಪಿಯುಸಿ ಪರೀಕ್ಷೆ ಹಿನ್ನೆಲೆ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿದ್ದಾರೆ. ನಗರದ ಜೂನಿಯರ್ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ. ಪರೀಕ್ಷಾ ಕೊಠಡಿಗಳ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ 9671, ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಎದುರಿಸಲಿರುವ 4597 ಬಾಲಕರು, 5074 ಬಾಲಕಿಯರು.
ವಿಜಯನಗರ – ಇಂದು ರಾಜ್ಯದಾದ್ಯಂತ ಪಿ.ಯು.ಸಿ ಪರೀಕ್ಷೆ ಹಿನ್ನೆಲೆ ವಿಜಯನಗರ ಜಿಲ್ಲೆಯಾದ್ಯಂತ ಸಕಲ ಸಿದ್ದತೆ ಜಿಲ್ಲಾಡಳಿತ ಕೈಗೊಂಡಿದ್ದಾರೆ. ಇಂದಿನಿಂದ ಮೇ 18ರವರೆಗೆ ನೆಡೆಯುವ ಪರೀಕ್ಷೆಗಳು. ವಿಜಯನಗರ ಮತ್ತು ಬಳ್ಳಾರಿಯ 30647 ವಿಧ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದು, ವಿಜಯನಗರ ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿದೆ. ಕಡ್ಡಾಯವಾಗಿ ಸಮವಸ್ತ್ರದಲ್ಲಿ ಪರೀಕ್ಷೆಗೆ ಹಾಜರು ಇರಬೇಕೆಂದು ಶಿಕ್ಷಣ ಇಲಾಖೆ ಅದೇಶ ಹೊರಡಿಸಿದೆ.
ತುಮಕೂರು – ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು. ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 28, 090 ವಿದ್ಯಾರ್ಥಿಗಳು. ಪರೀಕ್ಷಾ ಕೇಂದ್ರದ ಸುತ್ತ 200ಮೀ ನಿಷೇಧಾಜ್ಞೆ ಜಾರಿ. ಹಿಜಾಬ್ ಧರಿಸಿ ಬರುವ ಪರೀಕ್ಷಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ನಿರ್ಭಂದ.
ಗದಗ – ಜಿಲ್ಲೆಯಲ್ಲೂ ಪಿಯು ಪರೀಕ್ಷೆಗೆ ಸಕಲ ಸಿದ್ಧತೆ ಮಾಡಟಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ 22 ಸೆಂಟರ್ ಗಳಲ್ಲಿ ನಡೆಯಲಿರುವ ಪರೀಕ್ಷೆ ನಡೆಯುತ್ತಿದೆ. ಗದಗ ನಗರ 9, ನರಗುಂದ 2, ಶಿರಹಟ್ಟಿ ಪಟ್ಟಣದಲ್ಲಿ 2 ಸೆಂಟರ್ , ಮುಂಡರಗಿ 2, ಲಕ್ಷ್ಮೇಶ್ವರ 2, ರೋಣ 2, ಗಜೇಂದ್ರಗಡದಲ್ಲಿ 3 ಪರೀಕ್ಷೆ ಕೇಂದ್ರ ಒಪನ್. ಪರೀಕ್ಷೆ ಬರೆಯಲಿರುವ 6,040 ಗಂಡು, 5,814 ಹೆಣ್ಣು ಮಕ್ಕಳು.
ಹುಬ್ಬಳ್ಳಿ – ಹುಬ್ಬಳ್ಳಿಯ ಗಲಭೆ ಪ್ರಕರಣ. ಆರೋಪಿ ಅಭಿಷೇಕ ಹಿರೇಮಠ ಪರೀಕ್ಷೆ ಬರೆಯುವ ಹಿನ್ನೆಲೆ. ಪರೀಕ್ಷಾ ಕೇಂದ್ರದ ಬಳಿ ಪೊಲೀಸ್ ಬಂದೋಬಸ್ತ್. ನಗರದ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಪರೀಕ್ಷಾ ಕೇಂದ್ರ . ಮಹೇಶ ಪಿಯು ಕಾಲೇಜಿನ ಮುಂಭಾಗದಲ್ಲಿ ಭದ್ರತೆ. ಅಭಿಷೇಕ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ.
ರಾಮನಗರ – ಇಂದಿನಿಂದ ದ್ವೀತಿಯ ಪಿಯುಸಿ ಪರೀಕ್ಷೆ ಆರಂಭ. ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ರೇಷ್ಮೆ ನಗರಿಯಲ್ಲಿ ಈ ಬಾರಿ ಒಟ್ಟು 9912 ಮಂದಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳು. ಮೊದಲಬಾರಿಗೆ 8483 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. 1091 ಮಂದಿ ಪನಾವರ್ತಿತ ಅಭ್ಯಾರ್ಥಿಗಳು ಹಾಗೂ 332 ಮಂದಿ ಖಾಸಗಿ ಅಭ್ಯಾರ್ಥಿಗಳು. ಜಿಲ್ಲೆಯಲ್ಲಿ 13 ಪರೀಕ್ಷಾ ಕೇಂದ್ರಗಳ ಗುರುತು. ಕನಕಪುರ 2, ಹಾರೋಹಳ್ಳಿ 1, ಬಿಡದಿ 1, ಮಾಗಡಿ 2, ಚನ್ನಪಟ್ಟಣ 3, ರಾಮನಗರ 4 ಪರೀಕ್ಷಾ ಕೇಂದ್ರ ಗುರುತು. ಹಿಜಾಬ್ ಧರಿಸಿ ಬರಲು ಅವಕಾಶ ಇಲ್ಲ, ಆಯಾ ಕಾಲೇಜಿನ ಸಮವಸ್ತ್ರ ಧರಿಸಿ ಬರುವಂತೆ ಸೂಚನೆ ನೀಡಲಾಗಿದೆ.
ಕೋಲಾರ – ಕೋಲಾರ ಜಿಲ್ಲೆಯ 29 ಕೇಂದ್ರಗಳಲ್ಲಿ ಪಿಯು ಪರೀಕ್ಷೆ. ಹಿಜಾಬ್ ಗೆ ಅವಕಾಶವಿಲ್ಲ, ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸೂಚನೆ. ಹಿಜಾಬ್ ಅಥವಾ ಕೇಸರಿ ಶಾಲು ಮತ್ತಿತರ ಧಾರ್ಮಿಕತೆ ಬಿಂಬಿಸುವ ವಸ್ತ್ರಕ್ಕೆ ನಿಷೇಧ. ಜಿಲ್ಲೆಯಲ್ಲಿ 17008 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿ. ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ನಿಷೇಧ. ಕೋಲಾರ ಜಿಲ್ಲಾಡಳಿತ ರಿಂದ ಪರೀಕ್ಷಾ ಸಿದ್ದತೆ.
ಇದನ್ನು ಓದಿ :– ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ – ಪರೀಕ್ಷೆ ಬರೆಯಲು ಸಜ್ಜಾದ ವಿದ್ಯಾರ್ಥಿಗಳು