ಬೆಳಗಾವಿ ( BELGAVI ) ನಿಪ್ಪಾಣಿ, ಬೀದರ್, ಕಾರಾವಾರ ಮಹಾರಾಷ್ಚ್ರಕ್ಕೆ ಸೇರಬೇಕು. ಜೊತೆಗೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಒಕ್ಕೊರಲ ನಿರ್ಣಯ ಮಂಡಿಸಲಾಗಿದೆ. ಸಿಎಂ ಏಕನಾಥ್ ( EKNATH SHINDHE ) ಶಿಂಧೆ ಒಕ್ಕೊರಲ ನಿರ್ಣಯ ಮಂಡಿಸಿದ್ದಾರೆ. ಈ ಮೂಲಕ ಗಡಿ ವಿಚಾರದಲ್ಲಿ ಸಿಎಂ ಏಕನಾಥ್ ಮತ್ತೆ ಉದ್ಧತಟನ ಮೆರೆದಿದ್ದಾರೆ.
महाराष्ट्र विधिमंडळाच्या हिवाळी अधिवेशनातून लाईव्ह https://t.co/L9032UDoJY
— Eknath Shinde – एकनाथ शिंदे (@mieknathshinde) December 27, 2022
ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಣಯಕ್ಕೆ ಸರ್ವಸಮ್ಮತ ಒಪ್ಪಿಗೆ ಸಿಕ್ಕಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಮರಾಠಿ ಭಾಷಿಕರ ಪ್ರದೇಶಗಳ ಒಂದ ಇಂಚು ಜಾಗೆಯನ್ನ ನಾವು ಬಿಟ್ಟು ಕೊಡುವುದಿಲ್ಲ. ಕೇಂದ್ರ ಸರ್ಕಾರ ಬೆಳಗಾವಿ ಸೇರಿ 865 ಹಳ್ಳಿಗಳನ್ನ ಮಹಾರಾಷ್ಟ್ರ ಸೇರ್ಪಡೆ ಮಾಡಲು ಸಹಕಾರ ನೀಡುವಂತೆ ಸದನದಲ್ಲಿ ಠರಾವು ಪಾಸ್ ಮಾಡಿದ್ದಾರೆ. ಕರ್ನಾಟಕ ವಿಧಾನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ನಮ್ಮ ವಿರೋಧವಿದೆ, ಧಿಕ್ಕಾರವಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಸಿಎಂ ಹೇಳಿದ್ದಾರೆ.
ಇದನ್ನು ಓದಿ : – 40 ದಿನದಲ್ಲಿ 223 ಕೋಟಿ ರೂಪಾಯಿ ಆದಾಯ ಗಳಿಸಿದ ಶಬರಿಮಲೆ ದೇವಾಲಯ