ಮಹಾರಾಷ್ಟ್ರದಲ್ಲಿ (Maharastra) ಶಿವಸೇನೆ (Shivasena) ಶಾಸಕರ ಬಂಡಾಯ ಹಿನ್ನೆಲೆಯಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ (Mahesh kumtalli) ಹೊಸ ಬಾಂಬ್ ಸಿಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ (BJP) ಸರ್ಕಾರ ತರಲು ಸಾಹುಕಾರ್ ಪ್ಲಾನ್ ಮಾಡಿದ್ದರು ಎಂಬ ಸುಳಿವು ನೀಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh jarakiholi) ಎಲ್ಲಾ ಬಂಡಾಯ ಶಾಸಕರ ಜೊತೆ ಸಂಪರ್ಕದಲ್ಲಿದ್ದಾರೆ. ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷಕ್ಕೆ ಒಳಿತಾಗುವ ದೃಷ್ಟಿಯಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ರಮೇಶ್ ಜಾರಕಿಹೋಳಿ ಪಾತ್ರ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ನಗುತ್ತಲೆ ಉತ್ತರಿಸಿದ ಮಹೇಶ್ ಕುಮಟಳ್ಳಿ ಎಲ್ಲಾ ಕ್ರೆಡಿಟ್ ಹೋಗೊದು ಬಿಜೆಪಿ ಹಾಗೂ ನರೇಂದ್ರ ಮೋದಿ (Narendra modi) ನೇತೃತ್ವಕ್ಕೆ. ಇದನ್ನೂ ಓದಿ : – 2023ರವರೆಗೆ ಬೊಮ್ಮಾಯಿ ಸಿಎಂ ಆಗಿ ಮುಂದುವರಿತಾರೆ – ಮುರುಗೇಶ್ ನಿರಾಣಿ
ಜಾರಕಿಹೊಳಿಯದ್ದು ಪಾತ್ರ ಇದ್ದೆ ಇದೆ ಎಂದು ನಗು ನಗುತ್ತಲೆ ಕುಮಠಳ್ಳಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನಿಂದ ಆಪರೇಷನ್ ಕಮಲದ ಸಂದರ್ಭದಲ್ಲಿ ಸಾಹುಕಾರ್ ಜೊತೆ ಕುಮಠಳ್ಳಿ ಬಿಜೆಪಿಗೆ ಬಂದಿದ್ದರು. ಇದನ್ನೂ ಓದಿ : – ‘ವರ್ಷ ‘ ಬಂಗಲೆ ಬಾಗಿಲು ನಮಗೆ ಯಾವತ್ತೂ ತೆರೆಯಲೇ ಇಲ್ಲ- ಬಂಡಾಯ ಶಾಸಕರಿಂದ ಸಿಎಂ ಉದ್ಧವ್ ಠಾಕ್ರೆಗೆ ಪತ್ರ