ಸಿ ಎಸ್ಎಂ ಕಂಪನಿ ಕಸ್ಟೋಡಿಯನ್ ಬಂಧಿಸಿರೋ ಬಳ್ಳಾರಿ ( Ballari ) ಬ್ರೂಸ್ ಪೇಟೆ ಪೊಲೀಸರು 50.18 ಲಕ್ಷ ವಶ ಪಡಿಸಿಕೊಂಡಿದ್ದಾರೆ. ಕರ್ನಾಟಕ ಬ್ಯಾಂಕ್ ಎಟಿಎಂಗೆ ಹಣ ತುಂಬುವ ಕೆಲಸವನ್ನು ನೀಲಕಂಠ ಮಾಡುತ್ತಿದ್ದ .
ಮೇ 21 ರಂದು ಎಟಿಎಂಗೆ ತುಂಬಬೇಕಾಗಿದ್ದ 50.18ಲಕ್ಷ ಹಣದ ಸಮೇತ ಪರಾರಿಯಾಗಿದ್ದ. ಕೊಪ್ಪಳದಲ್ಲಿ ಹಣ ಸಹಿತ ಆರೋಪಿಯನ್ನ ಬಳ್ಳಾರಿ ಪೋಲಿಸರು ಬಂಧಿಸಿದ್ದಾರೆ. ಬಳ್ಳಾರಿ ಎಸ್ಪಿ ಸೈದುಲು ಅಡಾವತ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಹಾಲೇಶ್.ಎಂ . ನಾಗರಾಜ್ ಹಾಗೂ ಸಿಂಬಂದಿ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದ್ದಾರೆ . ಇದನ್ನೂ ಓದಿ : – ಭಾರತ ಸೇರಿ 16 ದೇಶಗಳಿಗೆ ಪ್ರಯಾಣ ಮಾಡಬೇಡಿ- ತನ್ನ ಪ್ರಜೆಗಳಿಗೆ ನಿರ್ಬಂಧ ಹೇರಿದ ಸೌದಿ ಅರೇಬಿಯಾ