ಕಾಂಗ್ರೆಸ್ ಪಕ್ಷ ಭಾರತ ಜೋಡೋ ಯಾತ್ರೆ (Bharathjodoyatra) ಯ ನಕ್ಷೆಯನ್ನು ಬಿಡುಗಡೆಗೊಳಿಸಿದ್ದು, 3500 ಕಿಲೋಮೀಟರ್ಗಳು ಪ್ರಯಾಣ ಬೆಳೆಸಲು ನಿರ್ಧರಿಸಿದೆ. ಕನ್ಯಾಕುಮಾರಿ (Kanya kumarri ) ಯಿಂದ ಕಾಶ್ಮೀರ (Kashmir) ದವರೆಗೆ ಭಾರತ ಜೋಡೋ ಯಾತ್ರೆಯಲ್ಲಿ ಕನ್ಯಾಕುಮಾರಿ, ತಿರುವನಂತಪುರ, ಕೊಚ್ಚಿ, ಮೈಸೂರು, ಬಳ್ಳಾರಿ, ರಾಯಚೂರಿನಿಂದ ಪ್ರಾರಂಭಿಸಿ ಶ್ರೀನಗರಕ್ಕೆ ತಲುಪುವ ಯೋಜನೆ ಹಾಕಿಕೊಂಡಿದೆ.
ಈ ಯಾತ್ರೆಯನ್ನು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು, ಸಾಮಾಜಿಕ ಧ್ರುವೀಕರಣದಿಂದ ಮುಕ್ತಿ ಪಡೆಯಲು ರಾಜಕೀಯ ಉದ್ವಿಗ್ನತೆಯನ್ನು ಹೋಗಲಾಡಿಸಿ, ಆರೋಗ್ಯಕರ ರಾಜಕಾರಣದ ಆರಂಭಕ್ಕಾಗಿ ಕೈಗೊಳ್ಳುತ್ತಿರುವುದಾಗಿ ಕಾಂಗ್ರೆಸ್ ಹೇಳಿದೆ. ಎಲ್ಲರೂ ಒಂದಾಗಿ ಭಾರತವನ್ನು ಒಗ್ಗೂಡಿಸೋಣ ಎಂದು ಕಾಂಗ್ರೆಸ್ ಕರೆ ನೀಡಿದೆ. ಇದನ್ನೂ ಓದಿ : – ನಾನು ಸಿಎಂ ಆಗಿದ್ದಾಗ ಕಮಿಷನ್ ವ್ಯವಸ್ಥೆ ಇರಲಿಲ್ಲ – ಹೆಚ್.ಡಿ ಕುಮಾರಸ್ವಾಮಿ
ದೇಶದಲ್ಲಿ 20 ರಿಂದ 24 ವರ್ಷದ ಶೇ. 42 ರಷ್ಟು ಯುವ ಜನತೆ ನಿರುದ್ಯೋಗಿಗಳಾಗಿದ್ದಾರೆ. ಬನ್ನಿ, ನಿರುದ್ಯೋಗದ ಜಾಲವನ್ನು ಮುರಿಯೋಣ, ಭಾರತವನ್ನು ಒಗ್ಗೂಡಿಸೋಣ ಎಂದು ಕಾಂಗ್ರೆಸ್ ಹೇಳಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಹೆಜ್ಜೆಗಳನ್ನು ಜೋಡಿಸಿ, ದೇಶವನ್ನು ಒಂದಾಗಿಸಿ ಎಂದು ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ : – ನಾನು ಆರ್.ಎಸ್.ಎಸ್ ಸಿದ್ದಾಂತದ ಜೊತೆಗಿದ್ದೀನಿ – ಸಮರ್ಥಿಸಿಕೊಂಡ ಬೊಮ್ಮಾಯಿ