ಸಕ್ಕರೆ ನಾಡು ಮಂಡ್ಯದಲ್ಲಿ ಬೈರಾಗಿ ಹವಾ

ಜುಲೈ 1 ರಂದು ಬೈರಾಗಿ (Bairagi) ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ, ಸಿನಿಮಾ ಪ್ರೊಮೋಷನ್ (Movie promotion)ಗಾಗಿ ಬೈರಾಗಿ ಚಿತ್ರತಂಡ ಮಂಡ್ಯ(Mandya) ಕ್ಕೆ ಆಗಮಿಸಿದೆ. ಚಿತ್ರತಂಡಕ್ಕೆ ಮಂಡ್ಯದಲ್ಲಿ ಅದ್ದೂರಿಯಾಗಿ ವೆಲ್ ಕಮ್ ಮಾಡಿದ್ದಾರೆ. ಪಟಾಕಿ ಸಿಡಿಸಿ, ಜೆಸಿಬಿ ಮೂಲಕ ಬೃಹತ್ ಹೂವಿನ ಹಾರ ಹಾಕಿ, ಪುಷ್ಪ ವೃಷ್ಟಿ ಹರಿಸಿ ಸ್ವಾಗತ ಕೋರಿದ್ದಾರೆ.

ಮಂಡ್ಯದ ಸಂಜಯ ವೃತ್ತದಲ್ಲಿ ಶಿವರಾಜ್ ಕುಮಾರ್ (Shivrajkumar) ಅಭಿಮಾನಿಗಳು ಸ್ವಾಗತಿಸಿದ್ದಾರೆ. ಡಾ.ರಾಜ್ ಪುತ್ಥಳಿ (Rajkumar statue) ಗೆ ಹಾರ ಹಾಕಿ, ಶಿವಣ್ಣ ನಮಿಸಿದರು. ಬೈರಾಗಿ ಪ್ರಚಾರಕ್ಕೆ ವಾಹನದ ಮೇಲೆ ನಿಂತು ಶಿವಣ್ಣನ ಡ್ಯಾನ್ಸ್ (dance) ಮಾಡಿದ್ದಾರೆ. ಶಿವರಾಜ್ ಕುಮಾರ್ ಗೆ ಡಾಲಿ ಧನಂಜಯ್ (Dolly dhananjay) ಸಾಥ್ ನೀಡಿದರು. ನೆಚ್ಚಿನ ನಟನ ಜೊತೆ ಸೆಲ್ಫಿಗೆ ಅಭಿಮಾನಿಗಳು ಮುಗಿಬಿದ್ದರು. ಇದೇ ವೇಳೆ ಪವರ್ ಸ್ಟಾರ್ ಅಪ್ಪು (Puneeth rajkumar) ಗೆ ಜೈಕಾರ ಹಾಕಿದರು.

ನಂಜುಂಡೇಶ್ವರನ ದರ್ಶನ ಪಡೆದ ಭೈರಾಗಿ ತಂಡ
ಮೈಸೂರಿನ ನಂಜುಂಡೇಶ್ವರನ ದೇವಾಲಯ (Nanjundeshwara temple) ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivrajkumar) ಪತ್ನಿ ಶ್ರೀಮತಿ ಗೀತಾ (Geetha) ಭೇಟಿ ನೀಡಿದರು. ನಟ ಶಿವರಾಜ್ ಕುಮಾರ್ ಗೆ ಡಾಲಿ ಧನಂಜಯ್ (Dhananjay) ಸಾಥ್ ನೀಡಿದರು. ನಟ ಶಿವರಾಜ್ ಕುಮಾರ್ ಗೆ ಕ್ರೇನ್ ಮೂಲಕ ಭಾರಿ ಗಾತ್ರದ ಹೂವಿನ ಹಾರ ಹಾಕಿ ಅಭಿಮಾನಿಗಳು ಸ್ವಾಗತಿಸಿದರು. ದೇವಾಲಯದ ಗರ್ಭ ಗುಡಿಯ ಬಳಿ ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಧ್ಯಾನ (Meditation) ಮಾಡಿದರು. ಇದನ್ನು ಓದಿ : – ನಾಗ ಚೈತನ್ಯ- ಶೋಭಿತಾ ರಿಲೇಶನ್‌ಶಿಪ್ ವಿಚಾರ- ಸಮಂತಾ ತಿರುಗೇಟು!

ತಂದೆ ಡಾ. ರಾಜಕುಮಾರ್ (Rajkumar) ತಾಯಿ ಪಾರ್ವತಮ್ಮ (Parvatamma) ಹೆಸರಿನಲ್ಲಿ ನಟ ಶಿವರಾಜ್ ಕುಮಾರ್ ಅರ್ಚನೆ ಮಾಡಿಸಿದರು. ನಟ ಶಿವರಾಜ್ ಕುಮಾರ್ ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ರು. ಬೈರಾಗಿ ಚಲನಚಿತ್ರ ತೆರೆದ ವಾಹನದಲ್ಲಿ ನಿಂತು ಅಭಿಮಾನಿಗಳತ್ತ ಕೈಬೀಸಿ ಅಭಿಮಾನಿಗಳನ್ನು ನೋಡಿ ಶಿವರಾಜ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ರು. ಮೈಸೂರಿನ ಚಾಮುಂಡಿಬೆಟ್ಟಕ್ಕೂ ತೆರಳಿ ಶಿವಣ್ಣ ಪೂಜೆ ಸಲ್ಲಿಸಿದ್ರು. ಇದನ್ನೂ ಓದಿ : – ತೆಲುಗು ಸಿನಿಮಾದಲ್ಲಿ ನಟಿಸಲು ಯಶ್ ಗೆ 100 ಕೋಟಿ ಆಫರ್ …!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!