ಪ್ರಿಯಾಂಕಾ ಗಾಂಧಿ (PRIYANKA GANDHI)ಬೆಂಗಳೂರಿಗೆ ಆಗಮಿಸಿರುವ ದಿನದಂದೇ ಆಡಳಿತಾರೂಢ ಬಿಜೆಪಿ ಸರ್ಕಾರವು ದಿನ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರ ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಮಾಡಿದ ತನ್ನ ಯೋಜನೆಗಳು ಮತ್ತು ಬಜೆಟ್ ಹಂಚಿಕೆಯ ಸಂಪೂರ್ಣ ಮಾಹಿತಿಯ ಜಾಹಿರಾತು ನೀಡುವ ಮೂಲಕ ಕಾಂಗ್ರೆಸ್ಗೆ ಟಕ್ಕರ್ ಕೊಟ್ಟಿದೆ.
ಬೊಮ್ಮಾಯಿ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಶೀಘ್ರದಲ್ಲೇ ಜಾರಿಗೆ ತರಲಿದೆ ಗೃಹಿಣಿ ಶಕ್ತಿ ಯೋಜನೆ. #ಬಿಜೆಪಿಯೇಭರವಸೆ #BJPYeBharavase pic.twitter.com/xnjXOHVgSZ
— BJP Karnataka (@BJP4Karnataka) January 16, 2023
ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ಮಹಿಳೆಯರಿಗಾಗಿ ವಿಶೇಷ ಘೋಷಣೆಗಳನ್ನು ಮಾಡಿದರೆ ಮಹಿಳಾ ಮತದಾರರು ಕಾಂಗ್ರೆಸ್ ಪಕ್ಷದತ್ತ ಒಲವು ತೋರಿಸಬಹುದೆಂಬ ಉದ್ದೇಶಕ್ಕೆ ಬಿಜೆಪಿ ಸರ್ಕಾರ ಪ್ರಮುಖ ದಿನಪತ್ರಿಕೆಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಎತ್ತಿ ತೋರಿಸುವ ಪೂರ್ಣ ಪುಟದ ಜಾಹೀರಾತು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( BASAVRAJ BOMMAI)ಅವರ ಭಾವಚಿತ್ರಗಳೊಂದಿಗೆ, ‘ನವ ಭಾರತಕ್ಕಾಗಿ ನವ ಕರ್ನಾಟಕ’ ಶೀರ್ಷಿಕೆಯ ಜಾಹೀರಾತು ನೀಡಿದೆ. ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳನ್ನು ಎತ್ತಿ ತೋರಿಸುವ ಕೆಲಸ ಮಾಡಿದೆ. ‘ಗೃಹಿಣಿ ಶಕ್ತಿ’ ಮತ್ತು ಅಮೃತ್ ಸ್ವಯಂ-ಸಹಾಯ ಮೈಕ್ರೋ ಎಂಟರ್ಪ್ರೈಸ್. ಎಲ್ಲಾ ಯೋಜನೆಗಳಿಗೆ ಬಜೆಟ್ ಹಂಚಿಕೆಗಳು ಮತ್ತು ಯೋಜನೆಗಳ ಅನುಷ್ಠಾನದ ವಿವರಗಳನ್ನು ಎತ್ತಿ ತೋರಿಸುವಂತೆ ದಿನಪತ್ರಿಕೆಗಳ ಪೂರ್ಣ ಪುಟದ ಜಾಹೀರಾತು ನೀಡಿದೆ. ಈ ಮೂಲಕ ಬಿಜೆಪಿ ಕೂಡ ಮಹಿಳೆಯರಿಗೆ ಆಧ್ಯತೆ ನೀಡಿದೆ ಎಂಬ ಸಂದೇಶ ಸಾರಿದೆ. ಇದನ್ನು ಓದಿ :- ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಗೆ ಪ್ರತಿ ತಿಂಗಳು 2,000 ರೂ – ಪ್ರಿಯಾಂಕಾ ಗಾಂಧಿ ಘೋಷಣೆ
ಬೊಮ್ಮಾಯಿ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಕಟಿಬದ್ಧವಾಗಿದ್ದು ಮಹಿಳೆಯರ ಕ್ಷೇಮಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕಾರ್ಮಿಕರ ಅಭ್ಯುದಯಕ್ಕೆ ಶ್ರಮಿಸುತ್ತಿದೆ. #ಬಿಜೆಪಿಯೇಭರವಸೆ #BJPYeBharavase pic.twitter.com/Yb2h6Y4UwA
— BJP Karnataka (@BJP4Karnataka) January 16, 2023
ಜಾಹೀರಾತಿನಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಕೈಗೊಂಡ ಕ್ರಮಗಳನ್ನೂ ನೀಡಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 1,412 ಕೋಟಿ ವೆಚ್ಚದಲ್ಲಿ 8,101 ತರಗತಿ ಕೊಠಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. 15,000 ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ( KALAYANA KARANATAK )ದಲ್ಲಿ 5,000 ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಕಾರ್ಮಿಕರ ಕಲ್ಯಾಣ ಮತ್ತು ಆರೋಗ್ಯಕ್ಕಾಗಿ ಕೈಗೊಂಡ ಕ್ರಮಗಳನ್ನು ಎತ್ತಿ ತೋರಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಗಾಂಧಿ ಬೆಂಗಳೂರಿಗೆ ಆಗಮಿಸಿದ ದಿನವೇ ಈ ಜಾಹೀರಾತನ್ನು ಹಾಕಲಾಗಿದೆ.
ಇದನ್ನು ಓದಿ :- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮತ್ತೆ ಹೆಚ್ಚಳ – ಮಾಜಿ ಸಿಎಂ ಸಿದ್ದರಾಮಯ್ಯ