ಸಿಎಂ ಬೊಮ್ಮಾಯಿ 1(Basavaraj bommai) ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಅಂತ ಹೇಳಿದ್ರು. ಇದು ಈಗ ಮಾರ್ಕೆಟ್ ಆಗಿದೆ, ಸೇಲ್ ಆಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸುರ್ಜೇವಾಲಾ (Surjewala) ಹೇಳಿದ್ದಾರೆ. PWD, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಲ್ಲಾ ಉದ್ಯೋಗಗಳು ಮಾರಾಟಕ್ಕಿವೆ. ಬ್ಲೂಟೂತ್, ಕ್ಯಾಮೆರಾ ಬಳಸಿ ಕಾಪಿ ಮಾಡಿಸಲಾಗಿದೆ.
ಈಗಾಗಲೇ ಪಿ ಎಸ್ ಐ (PSI) ಸ್ಕ್ಯಾಮ್ ರಾಜ್ಯದ ಜನತೆಗೆ ತಿಳಿದಿದೆ. ಬಿಜೆಪಿ (BJP) ಅವರು ವಿಧಾನಸೌಧವನ್ನ ಹಣ ಸ್ವೀಕರಿಸುವುದಕ್ಕೆ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ರು. ಪೊಲೀಸ್ ಅವರು ಅರೆಸ್ಟ್ ಮಾಡಲು ಹೋದಾಗ ಆರ್ ಡಿ ಪಾಟೀಲ್ ಪೊಲೀಸರನ್ನು ತಳ್ಳಿ ಹೋಗಿದ್ದಾರೆ. ಆರ್ ಡಿ ಪಾಟೀಲ್ ಲೋಕಾಯುಕ್ತಕ್ಕೆ ಬರೆದಿರೋ ಪತ್ರದಲ್ಲಿ ತನಿಖಾಧಿಕಾರಿ 3 ಕೋಟಿ ಕೇಳಿದ್ದಾರೆ ಈ ಕೇಸ್ ಮುಚ್ಚಿ ಹಾಕಲು. ಈಗ ಅವರು 76 ಲಕ್ಷ ಹಣವನ್ನು ಕೊಟ್ಟಿದ್ದಾರೆ. ಪ್ರಮುಖ ಆರೋಪಿ ಆರ್ ಡಿ ಪಾಟಿಲ್ ಪೊಲೀಸರನ್ನು ತಳ್ಳಿ ಹೋಗುತ್ತಾನೆ. ಈ ಭಾರಿ ಚುನಾವಣೆಗೂ ಆರ್ ಡಿ ಪಾಟಿಲ್ ಸ್ಪರ್ಧಿಸಬಹುದು. ಈ ಕೇಸ್ ಸಂಪೂರ್ಣವಾಗಿ ಹೈ ಕೋರ್ಟ್ ಚೀಫ್ ಜಸ್ಟೀಸ್ ಮೂಲಕ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ಪಿ ಎಸ್ ಐ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದನ್ನು ಓದಿ :- ತವರು ಜಿಲ್ಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಸ