ಸರ್ಕಾರದ ಮೀಸಲಾತಿ ಹೆಸ್ರಲ್ಲಿ ಮೋಸ ಮಾಡಿದೆ ಎಂದು ವಿಜಯಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( D.K SHIVKUMAR ) ಹೇಳಿದ್ದಾರೆ. ಸರ್ಕಾರ ಚಾಕೊಲೇಟ್ ನೀಡಿದೆ. ಈ ಚಾಕೊಲೇಟ್ ಬೇಡ ನಮಗೆ.ಇದು ತುಪ್ಪ ಸವರೋದು ಅಲ್ಲ, ಮೋಸ ಮಾಡಿದ್ದು. ನಾವು ಕೇಳ್ತಿರೋದು ಸಮಪಾಲು, ಸಮಬಾಳು. ಯಾವ ಸಮಾಜಕ್ಕು ಅವರು ನ್ಯಾಯ ಒದಗಿಸಿಲ್ಲ.
ಕಾನೂನು ಬದ್ಧವಾಗಿ ಹಂಚಿಕೆ ಆಗಿಲ್ಲ. ನಾವು ಒಕ್ಕಗಲಿಗರು 12% ಕೇಳಿದ್ವಿ, ಅದನ್ನ ಘೋಷಣೆ ಮಾಡಲಿ. ಕಾನೂನು ತೊಡಕು ಹಾಕಿ, ಯಾರಿಗೂ ಮೀಸಲಾತಿ ಸಿಗದಂತೆ ಬಿಜೆಪಿ ಪ್ಲಾನ್ ಮಾಡಿದೆ. ಇದು ರಾಜಕೀಯವಾಗಿ ಹೆದರಿ ಮಾಡಿದ ತೀರ್ಮಾನ. ಈ ಬಗ್ಗೆ ನಾವು ಹೈಕಮಾಂಡ್ ಮುಖಂಡರು ಸೇರಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ರು. ಇದನ್ನು ಓದಿ :-ಹೊಸ ವರ್ಷಾಚರಣೆ ಹಿನ್ನೆಲೆ – ಇಂದು ರಾತ್ರಿಯಿಂದಲೇ ಬೆಂಗಳೂರಿನ 30 ಫ್ಲೈ ಓವರ್ ಬಂದ್..!
100 % ಮೀಸಲಾತಿ ಕೊಡಲು ಆಗಲ್ಲ, ನಿರಾಣಿ ( MURUGESH NIRANI ) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಾಯಿ ತೆಗೆದರೆ ಪಾರ್ಟಿಯಿಂದ ಕಿತ್ತಾಕಿ ಬಿಡ್ತೀವಿ ಎಂದು ವಾರ್ನ್ ಮಾಡಿದ್ದಾರೆ. ಯತ್ನಾಳ್ ಉಸಿರೆ ಇಲ್ಲ.ಯತ್ನಾಳ್ ಹೇಳಿಕೆ ಕೊಡಲಿ ನೋಡೋಣ. ಬೆಂಬಲನಾದ್ರು ಕೊಡಲಿ, ವಿರೋಧನಾದ್ರು ಮಾಡಲಿ ನೋಡೋಣ. ಯತ್ನಾಳ್ ಯಾಕೆ ಬಾಯಿ ಮುಚ್ಚಿಕೊಂಡು ಇದ್ದಾರೆ. ಅಷ್ಟೆಲ್ಲಾ ಮಾತಾಡೋರು ಈಗ ಯಾಕೆ ಸುಮ್ಮನಿದ್ದಾರೆ? ಸಿಎಂ ಯಾಕೆ ಪ್ರೇಸ್ಮಿಟ್ ಮಾಡಲಿಲ್ಲ ಎಂದು ಸಿಎಂಗೆ ಡಿಕೆಶಿ ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ :- ರಾಮ-ಹನುಮಂತ ಬಿಜೆಪಿಯ ಹಕ್ಕುಸ್ವಾಮ್ಯವಲ್ಲ- ಕೇಸರಿಗೆ ತಲೆ ನೋವಾದ ಉಮಾಭಾರತಿ !