ಮಹದಾಯಿ (Mahadayi) ವಿಚಾರವಾಗಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಗೋವಾ ಮುಖ್ಯಮಂತ್ರಿಗಳ ಒಪ್ಪಿಗೆ ಪತ್ರ ಇದೆ ಅಂತಾ ಯಡಿಯೂರಪ್ಪ ಹೇಳಿದ್ರು ಎಂದು ಹೆಚ್. ಕೆ. ಪಾಟೀಲ್ (HK.Patil) ಹೇಳಿದ್ದಾರೆ. ಗದಗ (Gadag) ದಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮಹದಾಯಿ ಯೋಜನೆ ಜಾರಿ ಮಾಡ್ತೇನೆ ಅಂದಿದ್ರು.
ಯೋಜನೆ ಜಾರಿಯಾಗದಿದ್ರೆ ನಿಮಗೆ ಮುಖ ತೋರಿಸಲ್ಲ. ರಕ್ತದಲ್ಲಿ ಬರೆದು ಕೊಡ್ತೀನಿ ಅಂದ್ರು. ಯಡಿಯೂರಪ್ಪ ಅವರು ಎರಡು ವರ್ಷ ಆಡಳಿತ ಮಾಡಿದ್ರು. ನಂತ್ರ ಬೊಮ್ಮಾಯಿ (Bommai) ಅವರಿಗೆ ಅಧಿಕಾರ ಕೊಟ್ಟು ಹೋದ್ರು. ಎಲ್ಲಿ ನಿಮ್ಮ ರಕ್ತದಲ್ಲಿ ಬರೆದ ಪತ್ರ ಎಂದು ಯಡಿಯೂರಪ್ಪ (Yediyurappa) ರಿಗೆ ಸವಾಲು ಹಾಕಿದ್ದಾರೆ . ಎಲ್ಲಿದೆ ನಿಮ್ಮ 24 ಗಂಟೆ, ಸುಳ್ಳು ಘೋಷಣೆಗಳನ್ನ ಮಾಡಿ ಜನರಿಗೆ ಮೋಸಮಾಡಿದ್ರಿ. ಅಭಿವೃದ್ಧಿ ಕೆಲಸದಲ್ಲಿ ದ್ರೋಹ ಮಾಡಿ, ಜನರ ಕೃಪೆಗೆ ಪಾತ್ರ ಆಗಿದ್ದೀರಿ. ಮುಂದಿನ ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ. ಮಹದಾಯಿ ವಿಚಾರವಾಗಿ ವಿಧಾನ ಸಭೆ, ಪರಿಷತ್ತಿನಲ್ಲಿ ಎಷ್ಟೇ ಮಾತಾಡಿದ್ರೂ ಲಾಭ ಆಗ್ಲಿಲ್ಲ. ಅವರ ವಿಳಂಬ ದ್ರೋಹಕ್ಕೆ ಪ್ರತಿಭಟಿಸಿ ಜನವರಿ 2 ನೇ ತಾರೀಖು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಬೃಹತ್ ರ್ಯಾಲಿ ಮಾಡುವ ಮೂಲಕ ಬಿಜೆಪಿಯ ಚಳಿ ಬಿಡಿಸಬೇಕು. ವಿಳಂಬ ದ್ರೋಹಕ್ಕೆ ಜನಾಕ್ರೋಶ ಇದೆ ಅಂತಾ ಬಿಜೆಪಿಗೆ ತೋರಿಸ್ತೇವೆ. ರ್ಯಾಲಿ ಮೂಲಕ ಪಕ್ಷದ ನಾಯಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಹೆಚ್. ಕೆ. ಪಾಟೀಲ್ ತಿಳಿಸಿದ್ದಾರೆ.
ಇದನ್ನು ಓದಿ :- ಅಂಗವಿಕಲರಿಗೆ, ನಡೆಯೋಕೆ ಆಗದೆ ಇರುವವರಿಗೆ ಊರುಗೋಲು ಕೊಡಬೇಕು – ರಮೇಶ್ ಕುಮಾರ್