ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು ಅನ್ನೋದು ಎಲ್ಲರ ಆಶಯ. ಸಂವಿಧಾನ ಬದ್ಧವಾಗಿ ಅವರವರ ಧರ್ಮ ಪಾಲಿಸಲು ಅವಕಾಶ ಇದೆ. ಆದ್ರೆ ಒಂದು ಧರ್ಮದವರು ಇನ್ನೊಂದು ಧರ್ಮದವರಿಗೆ ತೊಂದರೆ ಕೊಡೋದು ಸರಿಯಲ್ಲ.
ಸಂವಿಧಾನ ಬದ್ಧವಾಗಿ ಅವರ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು ಚೀಫ್ ಮಿಸಿಸ್ಟರ್ ಲಾಠಿ ಹಿಡಿದು ರಸ್ತೆಯಲ್ಲಿ ನಿಲ್ಲಕ್ಕೆ ಆಗಲ್ಲ. ಕಾನೂನು ರೀತಿಯಲ್ಲಿ ಏನು ಕ್ರಮ ಕೈಗೊಳ್ಳಬೇಕು ಅದನ್ನ ಸಿಎಂ ಕೈಗೊಂಡಿದ್ದಾರೆ.
ಯಾರೋ ಟೀಕೆ ಮಾಡಿದ್ರೆ ಬೊಮ್ಮಾಯಿ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಮುಖ್ಯಮಂತ್ರಿಗಳು ಏನ್ ಮಾಡ್ಬೇಕು ಅದನ್ನ ಕ್ರಮ ಬದ್ಧವಾಗಿ ಮಾಡುತ್ತಿದ್ದಾರೆ. ಸಿಎಂ ಬಸವಣ್ಣ ಅಲ್ಲ. ಬಸವರಾಜ್ ಬೊಮ್ಮಾಯಿ. ಬಿ.ಕೆ ಹರಿಪ್ರಸಾದ್, ಸಿದ್ಧರಾಮಯ್ಯ ಅವರಿಗೆ ಮಾಡಲು ಕೆಲಸ ಇಲ್ಲ. ಹೀಗಾಗಿ ಟೀಕಿಸುತ್ತಾರೆ ಎಂದು ಹೇಳಿದ್ರು.
ಇದನ್ನು ಓದಿ :- ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ