ರಾಮನಗರ( ramanagar ) ದಲ್ಲಿ ಮಾಜಿ ಸಿಎಂ ಹೆಚ್ ಡಿಕೆ ವಿರುದ್ದ ಕಾಂಗ್ರೆಸ್- ಬಿಜೆಪಿ ನಗರಸಭೆ ಸದಸ್ಯರು ಧಿಕ್ಕಾರ ಕೂಗಿ ಮುಜುಗರ ಉಂಟುಮಾಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ನಗರಸಭೆಯಲ್ಲಿ
ಇಂದು ಸ್ವಚ್ಚತಾ ವಾಹನಗಳಿಗೆ ಚಾಲನೆ ನೀಡಲು ಬಂದಿದ್ದ ಮಾಜಿ ಸಿಎಂ ಹೆಚ್ಡಿಕೆಗೆ ಪ್ರತಿಭಟನೆಯ ಬಿಸಿ ತಟ್ಟಿದೆ.
ನಗರಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ತಿಲ್ಲ ಎಂದು ಆರೋಪಿಸಿದ್ದಾರೆಯ ನಗರಸಭೆ ಕಾರ್ಯಕ್ರಮ ಮಾಡ್ತಿಲ್ಲ ಜೆಡಿಎಸ್ ಕಾರ್ಯಕ್ರಮ ಮಾಡ್ತಾ ಇದ್ದಾರೆ ಎಂದು ಆರೋಪಿಸಿದ್ರು. ಇಂದಿನ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ನೀಡಿಲ್ಲ ಎಂದು ಧಿಕ್ಕಾರ ಕೂಗಿದ್ರು. ಬಳಿಕ ಪೋಲಿಸರ ಸರ್ಪಗಾವಲಿನಲ್ಲಿ ಸ್ವಚ್ಚತಾ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಹೆಚ್ ಡಿಕೆ ತೆರಳಿದ್ರು. ಕೆಲಕಾಲ ನಗರಸಭೆ ಮುಂಭಾಗ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿಕೆ ರಾಹುಲ್ ಗಾಂಧಿಯವರು ಪಕ್ಷ ಸಂಘಟನೆಗೆ, ಜನರ ವಿಶ್ವಾಸ ಗಳಿಸೋಕೆ ಪಾದಯಾತ್ರೆ ಮಾಡುತ್ತಿದ್ದಾರೆ .ಪಾದಯಾತ್ರೆಯ ಉದ್ದೇಶ ಹೇಳಬೇಕಲ್ವ? ನಿನ್ನೆ ಕಾಂಗ್ರೆಸ್ ಅವರು ಪಾದಯಾತ್ರೆ ಮಾಡಿದ್ದಾರಲ್ಲ, ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ? ನಿನ್ನೆಯ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸುಮಾರು 25 ಕೋಟಿ ಖರ್ಚಾಗಿದೆಯಂತೆ. ಆ ದುಡ್ಡು ಎಲ್ಲಿಂದ ಬಂತು ಹೇಳಬೇಕಲ್ವ ? ಈ ರೀತಿಯ ಪಾದಯಾತ್ರೆಗಳಿಂದ ಜನರ ಸಮಸ್ಯೆ ಬಗೆಹರಿಯೊಲ್ಲ. ಸರ್ಕಾರ ನಡೆಸಬೇಕಾದರೆ ಏನು ಕಾರ್ಯಕ್ರಮ ಕೊಟ್ಟಿದ್ದೆ ಎನ್ನುವುದು ಮುಖ್ಯವಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ : – ಬಿಹಾರ ಸಂಪುಟ ಸಚಿವರಿಗೆ ಖಾತೆ ಹಂಚಿಕೆ- ಗೃಹ ಖಾತೆ ಉಳಿಸಿಕೊಂಡ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಗೆ ಆರೋಗ್ಯ, ರಸ್ತೆ
ಸ್ವಾತಂತ್ರ್ಯ ತಂದು ಕೊಟ್ಟವರ ಬಗ್ಗೆ ಪ್ರಾಮಾಣಿಕವಾಗಿ ದುಡಿದವರ ಬಗ್ಗೆ ಬಿಜೆಪಿ ಸ್ಮರಿಸಿಕೊಳ್ಳುತ್ತಿಲ್ಲ. ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಕೆಲಸ ಆಗುತ್ತಿದೆ. ಸಮಾಜದಲ್ಲಿ ಸಂಘರ್ಷಗಳಿಗೆ ಎಡೆ ಮಾಡಿ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ನಾಯಕರ ಹೇಳಿಕೆಗಳಿಂದ ಸಹೋದರ ಬಾಂಧವ್ಯವನ್ನು ಕಲುಷಿತಗೊಳ್ಳುತ್ತಿದೆ. ಮುಂದೆ ನಮಗೆ ಅವಕಾಶ ಕೊಟ್ಟರೆ ಏನು ಕಾರ್ಯಕ್ರಮ ಕೊಡ್ತೀವಿ ಎನ್ನುವ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಬೇಕು. ಸುಮ್ಮನೆ ನಾನು ಒಂದು ಶೋಕಿಗಾಗಿ ಕಾರ್ಯಕ್ರಮ ಮಾಡುತ್ತೇನೆ ಅಂತಾ ಹೋದರೆ ಏನು ಪ್ರಯೋಜನ..? ಎಂದು ಪ್ರಶ್ನಿಸಿದರು.
ಸಚಿವ ಮಾಧುಸ್ವಾಮಿ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ ಮಾಧುಸ್ವಾಮಿ ಒಬ್ಬರು ಜವಾಬ್ದಾರಿ ಇರುವಂತಹ ಸಚಿವರು. ಪ್ರಮುಖವಾಗಿ ಕಾನೂನು ಇಲಾಖೆಯನ್ನು ನಿರ್ವಹಿಸುತ್ತಾರೆ. ಸರ್ಕಾರದ ನಡೆ ಯಾವ ರೀತಿ ಇದೆ ಅಂತಾ ಮಂತ್ರಿಗಳಿಂದಲೇ ಪ್ರತಿಕ್ರಿಯೆ ಬಂದಿದೆ. ಸಾರ್ವಜನಿಕವಾಗಿ ಎಲ್ಲರಲ್ಲೂ ಇರುವ ಭಾವನೆ ಅದು. ಮಂತ್ರಿಮಂಡಲದಲ್ಲಿರುವ ಅವರಲ್ಲೇ ವಿಶ್ವಾಸ ಇಲ್ಲದಿರುವುದನ್ಮು ಗಮನಿಸಿದ್ದೇನೆ. ಬೇರೆ ಮಂತ್ರಿಗಳು ಕೊಟ್ಟಂತಹ ಹೇಳಿಕೆಗಳನ್ನು ಗಮನಿಸಿದ್ದೇನೆ. ಈ ಸರ್ಕಾರ ಮಾಧುಸ್ವಾಮಿ ಅವರು ಹೇಳಿದ ರೀತಿ ಸಮಯ ತಳ್ಳುತ್ತಿದೆ. ಸರ್ಕಾರ ಜಾಹಿರಾತುಗಳ ಮೇಲೆ ನಡೆಯುತ್ತಿದೆ ಎಂದು ಟೀಕೆ ಮಾಡಿದರು.
ಇದನ್ನೂ ಓದಿ : – ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಪ್ರಕರಣ- ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಅಪರಾಧಿಗಳು ಬಿಡುಗಡೆ!